

ದೊಡ್ಡಬಳ್ಳಾಪುರ: ಕಾಶ್ಮೀರ ಪ್ರವಾಸಕ್ಕೆ ತೆರಳಿದ್ದ ತಾಲೂಕಿನ 95 ಮಂದಿ ಸುರತವಾಗಿದ್ದಾರೆ. ತೂಬಗೆರೆಯ ಸುತ್ತಮುತ್ತಲಿನ ಹಾಡೋನಹಳ್ಳಿ, ಲ್ಮದೇವಿಪುರ, ತಿರುಮಗೊಂಡನಹಳ್ಳಿ, ತಿಮ್ಮೋಜನಹಳ್ಳಿ, ತೂಬಗೆರೆ, ಹೀರೆಮುದ್ದೇನಹಳ್ಳಿ, ನೆಲಗುದಿಗೆ ಗ್ರಾಮಗಳಿಂದ 95 ಜನ 9 ದಿನಗಳ ಜಮ್ಮುಕಾಶ್ಮೀರ ಪ್ರವಾಸ ಕೈಗೊಂಡಿದ್ದರು.
ಏ.19 ರಂದು ಬೆಳಗ್ಗೆ 21 ಜನರ ಒಂದು ತಂಡ ಅಮೃತಸರ ತಲುಪಿದರೆ, ವಿಮಾನ ಟಿಕೆಟ್ ಗೊಂದಲದ ಕಾರಣ 74 ಮಂದಿಯ ಮತ್ತೊಂದು ತಂಡ ದೇವನಹಳ್ಳಿ ಎಂ.ಆರ್. ಟ್ರಾವೆಲ್ಸ್ ಏಜೆನ್ಸಿ ಮೂಲಕ ದೆಹಲಿಗೆ ತೆರಳಿ ಅಲ್ಲಿಂದ ಅಮೃತಸರದಲ್ಲಿ ಎಲ್ಲರೂ ಒಟ್ಟಾಗಿ ಸೇರಿದ್ದರು.
ಅಮೃತಸರದಲ್ಲಿ ಪ್ರೇಕ್ಷಣಿಯ ಸ್ಥಳಗಳನ್ನು ನೋಡಿಕೊಂಡು ಬಳಿಕ ಶ್ರೀನಗರಕ್ಕೆ ಪ್ರವಾಸ ತೆರಳಿದ್ದರು. ಉಗ್ರರ ದಾಳಿಗೆ ಒಳಗಾದ ಪಹಲ್ಗಾಮ್ನ ಬೈಸರನ್ ಸಮೀಪದಲ್ಲಿಯೇ ಇವರು ಎರಡು ದಿನಗಳ ಕಾಲ ಉಳಿದುಕೊಳ್ಳಲು ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಿದ್ದರು. ಆದರೆ, ಆ ರಸ್ತೆಯಲ್ಲಿ ಬೆಟ್ಟ ಕುಸಿದು ಸಂಚಾರ ಸ್ಥಗಿತಗೊಂಡ ಕಾರಣ ಮಾರ್ಗ ಬದಲಿಸಿದ ಬೆಂಗಳೂರಿನ 15 ಜನ ಸೇರಿ 110 ಮಂದಿ ಪ್ರವಾಸಿಗರು, ಕಟ್ರಾ ವೈಷ್ಣೋದೇವಿ ದರ್ಶನ ಮುಗಿಸಿ, ಕುಲುಮನಾಲಿಗೆ ಹಿಂತಿರುಗಿದ್ದಾರೆ ಎಂದು ತಿಳಿದುಬಂದಿದೆ. ಉಗ್ರರ ದಾಳಿ ಬಳಿಕ ಜಮ್ಮುಕಾಶ್ಮೀರ ಪ್ರವಾಸ ರದ್ದು ಮಾಡಿ ಉಳಿದ ಪ್ರವಾಸಿ ಸ್ಥಳಗಳಿಗೆ ತೆರಳಿದ್ದಾರೆ.