ಗಾರ್ನಿಯರ್ ಹೇರ್ ಕಲರಿಂಗ್‌ಗೆ ಮುಗಿಬಿದ್ದ ಜನ

10 Dwd 3
Published on

ಧಾರವಾಡ: ಪ್ರತಿಷ್ಠಿತ ಹೇರ್ ಕಲರಿಂಗ್ ಕಂಪನಿಯಾದ ಗಾರ್ನಿಯರ್ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ಹೇರ್ ಕಲರಿಂಗ್ ಅಭಿಯಾನ ಯಶಸ್ವಿಯಾಯಿತು. ನಗರದ ರೈಲ್ವೆ ಸ್ಟೇಷನ್ ರಸ್ತೆಯ ಕರ್ನಾಟಕ ಬ್ಯಾಂಕ್ ಹತ್ತಿರದ ತನಿಕ್ಷಾ ಅಕಾಡೆಮಿಯಲ್ಲಿ ಬೆಳಗ್ಗೆ ೧೦ರಿಂದ ೫ರವರೆಗೆ ನಡೆದ ಅಭಿಯಾನದಲ್ಲಿ ಸಾರ್ವಜನಿಕರು ಮುಗಿಬಿದ್ದು, ಕೂದಲಿಗೆ ತಮಗಿಷ್ಟದ ಕಲರ್ ಮಾಡಿಸಿಕೊಂಡರು. ಕಂಪನಿಯ ಪರಿಣಿತರು ಪುರುಷ ಮತ್ತು ಮಹಿಳೆಯರಿಗೆ ಉಚಿತ ಹೇರ್ ಕಲರಿಂಗ್ ಮಾಡಿದರು. ನೂರಾರು ಪುರುಷ- ಮಹಿಳೆಯರು ಅಭಿಯಾನದ ಪ್ರಯೋಜನ ಪಡೆದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೇ ೧೧ರಿಂದ ಮದಿಹಾಳದ ಶ್ರೀ ಜೋಶಿ ಮಂಗಲ ಕಾರ್ಯಾಲಯದಲ್ಲಿ ಗಾರ್ನಿಯರ್ ಹೇರ್ ಕಲರಿಂಗ್ ಅಭಿಯಾನ ಮುಂದುವರಿಯಲಿದೆ. ಸಾರ್ವಜನಿಕರು ಉಚಿತ ಅಭಿಯಾನದ ಪ್ರಯೋಜನ ಪಡೆದುಕೊಳ್ಳಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net