ಜನರಿಗೆ ಯೋಜನೆಯ ಲಾಭ ಸಿಗಲಿ

05Huk2-Web
ಕಮತನೂರ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗೆ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಭೂಮಿಪೂಜೆ ನೆರವೇರಿಸಿದರು. ರೇಖಾ ಹತ್ತರಕಿ, ಶಿವಲೀಲಾ ಚೌಗಲಾ, ಪ್ರಶಾಂತ ಪಾಟೀಲ, ಕಲ್ಲಣ್ಣ ಚೌಗಲಾ ಇತರರಿದ್ದರು.
Published on

ಹುಕ್ಕೇರಿ: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಜಲಜೀವನ್ ಮಿಷನ್ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ. ಅಧಿಕಾರಿಗಳು ಪ್ರತಿಯೊಬ್ಬರಿಗೂ ಯೋಜನೆಯ ಲಾಭ ಸಿಗುವಂತೆ ನೋಡಿಕೊಳ್ಳಬೇಕು ಎಂದು ವಿದ್ಯುತ್ ಸಹಕಾರಿ
ಸಂಘದ ನಿರ್ದೇಶಕ ಪೃಥ್ವಿ ರಮೇಶ ಕತ್ತಿ ಹೇಳಿದ್ದಾರೆ.

ತಾಲೂಕಿನ ಕಮತನೂರ ಗ್ರಾಮದಲ್ಲಿ ಭಾನುವಾರ 1.4 ಕೋಟಿ ರೂ. ಮೊತ್ತದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸಚಿವ ಉಮೇಶ ಕತ್ತಿ ಅವರು ನೀರಾವರಿ ಯೋಜನೆಗಾಗಿ ಕೆರೆ ತುಂಬಿಸಿದ್ದಾರೆ. ಬೆಳೆ ಸಾಗಣೆ ಮಾಡಲು ಗುಣಮಟ್ಟದ ರಸ್ತೆ ನಿರ್ಮಾಣ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲು ಶಾಲೆ, ಧಾರ್ಮಿಕ ಕಾರ್ಯಕ್ರಮಗಳಿಗಾಗಿ ಸಮುದಾಯ ಭವನ ನಿರ್ಮಿಸಿ ಕ್ಷೇತ್ರದ ಸಂಪೂರ್ಣ ಪ್ರಗತಿ ಕೈಗೊಂಡಿರುವುದರಿಂದ ಮತದಾರರ ಪರವಾಗಿ ಅವರನ್ನು ಅಭಿನಂದಿಸುವೆ ಎಂದರು.

ಪಿಡಿಒ ಮಹೇಶ ಯಡವಣ್ಣವರ ಮಾತನಾಡಿ, ಶೇ.10 ಗ್ರಾಮ ಪಂಚಾಯಿತಿ ವಂತಿಗೆ ಮತ್ತು 15ನೇ ಹಣಕಾಸಿನ ಶೇ.15 ಅನುದಾನ ಬಳಕೆ ಮಾಡಿಕೊಂಡು ಜಲಜೀವನ್ ಮಿಷನ್ ಯೋಜನೆ ಕಾರ್ಯರೂಪಕ್ಕೆ ಬಂದಿದೆ. ಈಗಾಗಲೇ ಗ್ರಾಮದಲ್ಲಿ ಸರ್ವೇ ಕಾರ್ಯ ಮುಗಿದು ಎರಡು ಕಡೆಗಳಲ್ಲಿ ಎರಡು ಓವರ್‌ಹೆಡ್‌ಟ್ಯಾಂಕ್ ನಿರ್ಮಾಣ ಮಾಡುವ ಮೂಲಕ ಕಮತನೂರ ಗ್ರಾಪಂ ವ್ಯಾಪ್ತಿಯ 800 ಕುಟುಂಬಗಳಿಗೆ
ಲಾಭ ಒದಗಿಸುವಂತೆ ನೋಡಿಕೊಳ್ಳಲಾಗುತ್ತಿದೆ ಎಂದರು.

ಗ್ರಾಪಂ ಅಧ್ಯಕ್ಷೆ ರೇಖಾ ಹತ್ತರಕಿ, ಉಪಾಧ್ಯಕ್ಷೆ ಶಿವಲೀಲಾ ಚೌಗಲಾ, ಎಪಿಎಂಸಿ ನಿರ್ದೇಶಕ ಪ್ರಶಾಂತ ಪಾಟೀಲ, ಮುಖಂಡರಾದ ಕಲ್ಲಣ್ಣ ಚೌಗಲಾ, ಬಿ.ಜೆ.ಪಾಟೀಲ, ಶಿವಗೌಡ ಪಾಟೀಲ, ಸುರೇಶ ಭೋರಗಲ್ಲಿ, ಮಲ್ಲಪ್ಪ ಅಂಕಲೆ, ವಿರುಪಾಕ್ಷಿ ಚೌಗಲಾ, ಶಿವಲಿಂಗ ಪುಟ್ಟಿ, ಸುಭಾಷ ಪಾಟೀಲ, ಗುರುಲಿಂಗ ಹಿರೇಕೋಡಿ ಮತ್ತು ಗ್ರಾಪಂ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net