ಜನರ ಸಮಸ್ಯೆ ನಿವಾರಿಸಲು ಸನ್ನದ್ಧರಾಗಿ

16blh9 yaradal-Web
ಬೈಲಹೊಂಗಲ ತಾಲೂಕಿನ ಯರಡಾಲದಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಗ್ರಾಮೀಣ ಕಾರ್ಯಪಡೆ ಸದಸ್ಯರ ಸಭೆಯಲ್ಲಿ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿದರು.ಡಾ.ಎಸ್.ಎಸ್.ಸಿದ್ದಣ್ಣವರ, ಮಂಜುನಾಥ ಕುಸುಗಲ್, ಮಹಾಂತೇಶ ಭಜಂತ್ರಿ, ಪ್ರಕಾಶ ಮೆಳವಂಕಿ ಇತರರು ಇದ್ದರು.
Published on

ಬೈಲಹೊಂಗಲ: ಜನಸೇವಕರು ಕೇವಲ ಪ್ರಚಾರಕ್ಕೆ ಮಾತ್ರ ಸಿಮೀತವಾಗಬಾರದು. ಸಾರ್ವಜನಿಕರ ಸಮಸ್ಯೆಗಳನ್ನು ನಿವಾರಿಸಲು ಸದಾ ಸನ್ನದ್ಧರಾಗಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ಹೇಳಿದರು.

ತಾಲೂಕಿನ ಯರಡಾಲ ಗ್ರಾಮದಲ್ಲಿ ಕರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಗ್ರಾಮೀಣ ಕಾರ್ಯಪಡೆ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ತಹಸೀಲ್ದಾರ್ ಡಾ.ದೊಡ್ಡಪ್ಪ ಹೂಗಾರ ಮಾತನಾಡಿ, ನೌಕರರು ಕಾರ್ಯಗಳನ್ನು ಕಟ್ಟುನಿಟ್ಟಾಗಿ ನೆರವೇರಿಸುತ್ತಿದ್ದು, ಅವರಿಗೆ ಜನರು ಸಹಕಾರ ನೀಡಬೇಕು. ನಿರ್ಗತಿಕರು, ಭಿಕ್ಷುಕರು ಹಾಗೂ ವಲಸೆ ಬಂದವರ ಕುರಿತು ಗ್ರಾಪಂ ಕಚೇರಿಗಳು ಮಾಹಿತಿ ಸಂಗ್ರಹಿಸಿ ಪಡಿತರ ಒದಗಿಸಲು ವ್ಯವಸ್ಥೆ ಮಾಡಬೇಕು ಎಂದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಮೀರ್ ಮುಲ್ಲಾ ಮಾತನಾಡಿ, ಪ್ರತಿ ಕುಟುಂಬದ ಸದಸ್ಯನನ್ನು ಪರೀಕ್ಷಿಸಲು ಆರೋಗ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಆಗಮಿಸಲಿದ್ದಾರೆ ಎಂದರು.

ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದಣ್ಣವರ, ಸಿಪಿಐ ಮಂಜುನಾಥ ಕುಸುಗಲ್, ಸಿಡಿಪಿಒ ಮಹಾಂತೇಶ ಭಜಂತ್ರಿ, ತಾಲೂಕು ಅಕ್ಷರ ದಾಸೋಹ ನಿರ್ದೇಶಕ ಪ್ರಕಾಶ ಮೆಳವಂಕಿ, ಬೈಲವಾಡ ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ಗಿರೆಪ್ಪಗೌಡರ, ಉಪಾಧ್ಯಕ್ಷ ಭೀಮಪ್ಪ ಕಮತಗಿ, ಕಂದಾಯ ನಿರೀಕ್ಷಕ ಆರ್.ವೈ.ಕೋಲಕಾರ, ಪಿಡಿಒ ಎಸ್.ಜಿ. ಪೂಜೇರಿ, ಗ್ರಾಪಂ ಸದಸ್ಯರಾದ ನಿಂಗಪ್ಪ ರಾಜಗೋಳಿ, ಕಾಶವ್ವ ಬೈಲಪ್ಪನವರ, ಎಸ್.ಕೆ. ಡೊಂಕನವರ, ನಬೀನಾ ನದಾಫ್, ವಿ.ಆರ್. ಬನಶೆಟ್ಟಿ ಹಾಗೂ ವಿವಿಧ ಗ್ರಾಮಸ್ಥರು ಇದ್ದರು. ಬಳಿಕ ಮಾಸ್ಕ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net