ಜನಪರ ಚಿಂತಕ ವಿಶ್ವಾಸ ವೈದ್ಯ

12YARAGATTI1
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;
Published on

ಯರಗಟ್ಟಿ: ಶಾಸಕ ವಿಶ್ವಾಸ ವೆದ್ಯ ಅವರ 44ನೇ ಜನ್ಮದಿನ ಅಂಗವಾಗಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಹೊರತಂದ ವಿಶೇಷ ಪುರವಣಿಯನ್ನು ಇಲ್ಲಿನ ಪ್ರವಾಸಿ ಮಂದಿರದಲ್ಲಿ ಭಾನುವಾರ ಬಿಡುಗಡೆ ಮಾಡಲಾಯಿತು.

ಭಾಗೋಜಿಕೊಪ್ಪ ಹಿರೇಮಠದ ಮುರುರಾಜೇಂದ್ರ ಸ್ವಾಮೀಜಿ ಮತ್ತು ಸತ್ತಿಗೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಮೊದಲ ಬಾರಿಗೆ ಶಾಸಕರಾಗಿರುವ ವಿಶ್ವಾಸ ವೆದ್ಯ ಅತ್ಯಂತ ಕ್ರಿಯಾಶೀಲವಾಗಿ ಜನಪರವಾದ ಅಭಿವದ್ಧಿ ಕೆಲಸ ಮಾಡುತ್ತಿದ್ದಾರೆ. ಸರಳವಾಗಿ ಎಲ್ಲರೊಂದಿಗೆ ವೇಗವಾಗಿ ಬೆರೆಯುತ್ತಾರೆ. ಕ್ಷೇತ್ರದ ಅಭಿವೃದ್ಧಿ ಪರ ಚಿಂತನೆಯುಳ್ಳ ನಾಯಕರನ್ನು ಪಡೆದಿರುವುದು ಕ್ಷೇತ್ರಕ್ಕೆ ಸಂತಸ ತಂದಿದೆ. ಶಾಸಕರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಉಪಯುಕ್ತ ಕೆಲಸಗಳು ನಡೆಯಲಿ ಎಂದು ಆಶಿಸಿದರು.

ವಿಶ್ವಾಸ ವೆದ್ಯ ಜನ್ಮದಿನದ ಅಂಗವಾಗಿ ವಿಜಯವಾಣಿ ಹೊರತಂದಿರುವ ವಿಶೇಷ ಪುರವಣಿ ಬಹಳಷ್ಟು ಮಾಹಿತಿ ಪೂರ್ಣವಾಗಿದೆ. ಅತ್ಯಂತ ಸುಂದರ ವಿನ್ಯಾಸದಲ್ಲಿ ಮೂಡಿ ಬಂದಿದೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಯುವ ಮುಖಂಡರಾದ ಪ್ರಕಾಶ ವಾಲಿ, ಸಂತೋಷ ಹಾದಿಮನಿ ಮಾತನಾಡಿ, ಅತಿ ಕಡಿಮೆ ಅವಧಿಯಲ್ಲಿ ಬಹಷ್ಟು ಜನಪರ ಕೆಲಸಗಳಿಂದ ಹೆಸರುವಾಸಿಯಾದ ಶಾಸಕರು ಕ್ಷೇತ್ರದ ಅಭಿವದ್ಧಿ ಪರವಾದ ಕೆಲಸಗಳನ್ನು ಹಂತ ಹಂತವಾಗಿ ಪೂರೈಸುತ್ತ ಸಾಗುತ್ತಿರುವುದು ನಮಗೆಲ್ಲ ಸಂತೋಷ ಉಂಟು ಮಾಡಿದೆ ಎಂದರು.

ಪಪಂ ಸದಸ್ಯ ನಿಖಿಲ ಪಾಟೀಲ, ಮುಖಂಡರಾದ ಬಂಗಾರಪ್ಪ ಹರಳಿ, ಉಮೇಶ ಮಾಗುಂಡನವರ, ರಮೇಶ ಪಾಟೀಲ, ಗುರಪ್ಪ ಶೆಟ್ಟರ, ಯಲ್ಲಪ್ಪ ಮುನ್ಯಾಳ, ಶ್ರೀಕಾಂತಯ್ಯ ಮಠಪತಿ, ಶ್ರೀಶೈಲ ಸಂಗಪ್ಪನವರ, ಚನ್ನಪ್ಪ ಶೆಟ್ಟರ, ಅರುಣ ಪಟ್ಟೇದ, ಮಹಾಂತೇಶ ಕರ್ಜಗಿಮಠ, ಮಲ್ಲಿಕಾರ್ಜುನ ಅರಳಿಮಟ್ಟಿ, ಮುತ್ತು ದೇವರಡ್ಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net