

ದೊಡವಾಡ: ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಿಂದ ಗ್ರಾಮದ ಮುಲ್ತಾನ ಕೆರೆ ಅಭಿವದ್ಧಿಯಾಗಿ ನೂರಾರು ರೆತರಿಗೆ ಅನುಕೂಲ ಕಲ್ಪಿಸಲಿದ್ದು, ಗ್ರಾಮಸ್ಥರು ಸದುಪಯೋಗ ಪಡೆಯಬೇಕು ಎಂದು ಗ್ರಾಪಂ ಅಧ್ಯೆ ಸಂಗೀತಾ ಚಂದರಗಿ ಹೇಳಿದರು.
ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಧರ್ಮಸ್ಥಳ ಗ್ರಾಮಾಭಿವದ್ಧಿ ಯೋಜನೆಯಿಂದ ಹೂಳೆತ್ತುವ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಮಾತನಾಡಿದರು.
ಬೆಲಹೊಂಗಲ ತಾಲೂಕಿನ ಯೋಜನಾಧಿಕಾರಿ ವಿಜಯಕುಮಾರ್ ಎಂ. ಮಾತನಾಡಿ, ಸಂಸ್ಥೆಯಿಂದ ರಾಜ್ಯಾದ್ಯಂತ 820 ಕೆರೆ ಪುನಶ್ಚೇತನಗೊಳಿಸಲಾಗಿದೆ ಎಂದರು.
ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ಕೆರೆ ಅಭಿಯಂತ ನಿಂಗರಾಜ ಮಾಳವಾಡ ಮಾತನಾಡಿ, ಕೆರೆಯ ಹೂಳೆತ್ತಿದ ಮಣ್ಣನ್ನು ಕಷಿ ಜಮೀನಿಗೆ ಹಾಕಿಕೊಂಡು ಲಾಭ ಪಡೆಯಬೇಕು. ಗ್ರಾಮಸ್ಥರು ಕೆರೆಯನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರು.
ಪಿಕೆಪಿಎಸ್ ಅಧ್ಯ ನಿಂಗಪ್ಪ ಚೌಡನ್ನವರ, ಉಪಾಧ್ಯ ಗುರುನಾಥ ತಡಕೋಡ, ಗ್ರಾಪಂ ಉಪಾಧ್ಯೆ ಶೋಭಾ ಮಡಿವಾಳರ, ಕೆರೆ ಸಮಿತಿ ಅಧ್ಯ ಪುಂಡಲಿಕಪ್ಪ ಅಂದಾನಶೆಟ್ಟಿ, ಧರ್ಮಸ್ಥಳ ವಲಯದ ಕಷಿ ಮೇಲ್ವಿಚಾರಕ ರವಿ ಗೊಂಡ, ಗ್ರಾಪಂ ಸದಸ್ಯರು, ಮಖಂಡರು, ಸಂದ ಸದಸ್ಯರು, ಸೇವಾ ಪ್ರತಿನಿಧಿಗಳಿದ್ದರು.