ಜನರ ಹಿತ ಮರೆತೆ ಸರ್ಕಾರ

24 sep krt 01
ಕುಕನೂರಿನಲ್ಲಿ ಬಿಜೆಪಿ ಕಾರ್ಯಕರ್ತರು ರಸ್ತೆಯಲ್ಲಿ ಬಿದ್ದ ಗುಂಡಿಯ ಬಳಿ ಕುಳಿತು ಪ್ರತಿಭಟನೆ ನಡೆಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ, ಮೌನೇಶ ದಢೇಸೂಗೂರು, ದೇವರಾಜ ನಾಯಕ, ಶಿವಶರಣಪ್ಪ ಶಿವಪೂಜೆ, ಅಮರೇಶಪ್ಪ ನಾಯಕ ಚಳ್ಳೂರು, ಹನುಮಂತಪ್ಪ ಹಗೇದಾಳ, ಧನಂಜಯ್ ಎಲಿಗಾರ್ ಇದ್ದರು.
Published on

ಕಾರಟಗಿ: ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚದೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷೃ ವಹಿಸಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ ಮಸ್ಕಿ ಹೇಳಿದರು.

ರಾಜ್ಯದ ರಸ್ತೆಗಳ ಅವ್ಯವಸ್ಥೆ ಖಂಡಿಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಭ್ರಮಾಲೋಕದಲ್ಲಿ ಆಡಳಿತ ನಡೆಸುತ್ತಿದ್ದು ಸಂಪೂರ್ಣ ಜನರ ಹಿತ ಮರೆತಿದೆ. ಸರ್ಕಾರದ ಖಜಾನೆಯೇ ಖಾಲಿಯಾಗಿದ್ದು, ರಾಜ್ಯದ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದೆ. ಮೂಲ ಸೌಕರ್ಯವನ್ನು ಕಡೆಗಣಿಸಿ, ದುರಾಡಳಿತದಲ್ಲಿ ತೊಡಗಿಸಿಕೊಂಡಿರುವ ರಾಜ್ಯ ಸರ್ಕಾರವು ರಾಜ್ಯವನ್ನೇ ಗುಂಡಿಗಳ ಊರು ಮಾಡಿದೆ. ಕೂಡಲೇ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ ಜನರ ಜೀವ ಕಾಪಾಡಲು ಮುಂದಾಗದಿದ್ದರೆ ಹೋರಾಟ ನಡೆಸಲಾಗುವುದು ಎಂದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸೂಗೂರು ಮಾತನಾಡಿ, ರಾಜ್ಯದಲ್ಲಿ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸೇರಿದಂತೆ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗಳು ಸೇರಿದಂತೆ ಯಾವೊಂದು ಸೌಲಭ್ಯ ಕಲ್ಪಿಸದ ರಾಜ್ಯ ಸರ್ಕಾರ ತುಷ್ಟೀಕರಣದಲ್ಲಿ ತೊಡಗಿಸಿಕೊಂಡಿದ್ದು ಜನರ ದಾರಿ ತಪ್ಪಿಸುತ್ತಿದೆ ಎಂದರು.

ಬಿಜೆಪಿ ಎಸ್‌ಟಿ ಮೋರ್ಚಾ ಅಧ್ಯಕ್ಷ ದೇವರಾಜ ನಾಯಕ, ರೈತ ಮೋರ್ಚಾ ಅಧ್ಯಕ್ಷ ಶಿವಶರಣಪ್ಪ ಶಿವಪೂಜೆ, ಪ್ರಮುಖರಾದ ಅಮರೇಶಪ್ಪ ನಾಯಕ ಚಳ್ಳೂರು, ಹನುಮಂತಪ್ಪ ಹಗೇದಾಳ, ಧನಂಜಯ್ ಎಲಿಗಾರ್, ಬಸವರಾಜ ಬಸವಣ್ಣ ಕ್ಯಾಂಪ್, ದೇವರಾಜ ಮೈಸೂರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net