ಜಿಲ್ಲೆಯಲ್ಲಿ ಶ್ವಾನಗಳ ಕಾಟಕ್ಕೆ ತತ್ತರಿಸಿ ಜನ ಎಆರ್‌ಬಿ ವ್ಯಾಕ್ಸಿನ್‌ಗೆ ಸಾರ್ವಜನಿಕರ ಮುಂದು

raichur
raichur
Published on

ರಾಚಯ್ಯ ಸ್ವಾಮಿ ಮಾಚನೂರು

ರಾಯಚೂರು ನಗರ ಸೇರಿದಂತೆ ಜಿಲ್ಲಾದ್ಯಂತ ದಿನದಿಂದ ದಿನಕ್ಕೆ ಶ್ವಾನಗಳ ಹಾವಳಿಗೆ ಸಾರ್ವಜನಿಕರು ರೋಸಿಹೋಗಿದ್ದು, ರಸ್ತೆಗೆ ಇಳಿಯಲು ಹಿಂದೇಟು ಹಾಕುತ್ತಿದ್ದಾರೆ.

ನಗರ ಸೇರಿದಂತೆ ಜಿಲ್ಲೆಯಲ್ಲಿ ಬೀದಿ ಶ್ವಾನಗಳು ಗುಂಪು ಗುಂಪಾಗಿ ಅಲೆಯುತ್ತಿದ್ದು, ದಾರಿಯಲ್ಲಿ ತಿರುಗಾಡುವ ಜನರಿಗೆ ಕಚ್ಚಿ ಗಾಯಗೊಳಿಸುತ್ತಿವೆ. ರಸ್ತೆಯಲ್ಲೇ ಠಿಕಾಣಿ ಹೂಡುವ ನಾಯಿಗಳ ದಾಳಿಗೆ ವೃದ್ಧರು, ಶಾಲಾ ಮಕ್ಕಳೇ ಹೆಚ್ಚು ಸಿಲುಕಿ ಗಾಯಗೊಂಡು ಚಿಕಿತ್ಸೆ ಪಡೆಯುವಂತಾಗಿದೆ.

ಹೆಚ್ಚಿದ ಶ್ವಾನಗಳ ಅಂಕಿ ಸಂಖ್ಯೆ

ಜಿಲ್ಲೆಯಲ್ಲಿ ಕಳೆದ ವರ್ಷ ಕೇವಲ 7 ಸಾವಿರ ನಾಯಿಗಳು ಮಾತ್ರ ಇದ್ದವು ಆದರೆ ಈ ವರ್ಷ ಸುಮಾರು 9 ಸಾವಿರಕ್ಕೂ ಅಧಿಕ ನಾಯಿಗಳು ಹೆಚ್ಚಳವಾಗಿದ್ದು, ಆರೋಗ್ಯ ಇಲಾಖೆ ಮಾಹಿತಿ ಕೆವಲ ನಗರದಲ್ಲಿ ಮಾತ್ರ ಒಂದು ವಾರದಲ್ಲಿ 26 ಕ್ಕೂ ಅಧಿಕ ಜನರಿಗೆ ನಾಯಿಕಡಿತ ವಾಗಿದೆ. ಅದರಂತೆ ಪ್ರಸ್ತುತ ವರ್ಷದಲ್ಲಿ ಸುಮಾರು 300 ಜನರಿಗೆ ನಾಯಿ ಕಚ್ಚಿದ್ದು, ಆರೋಗ್ಯ ಇಲಾಖೆಯಲ್ಲಿ ಪ್ರತಿ ದಿನ 70ಕ್ಕೂ ಅಧಿಕ ಜನರಿಗೆ ಹ್ಯಾಂಟಿ ರ‌್ಯಾಬಿಸ್ ಇಂಜೆಕ್ಷನ್‌ನನ್ನು ಜನರು ಪಡೆಯುತ್ತಿದ್ದಾರೆ.

ಹೆಚ್ಚಿನ ನಾಯಿ ಕಡಿತ

ನಗರ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲೆಡೆ ಬೀದಿ ನಾಯಿಗಳ ಹಾವಳಿ ಅತೀವ ಹೆಚ್ಚಳ ಕಂಡಿದೆ. ಈಗಾಗಲೇ ಬಿಡಾಡಿ ದನಗಳ ಹಾವಳಿಗೆ ಜನ ರಸ್ತೆಯಲ್ಲಿ ವಾಹನಗಳಲ್ಲಿ ಸರಾಗವಾಗಿ ಸಾಗಲೂ ಹೆದರುತ್ತಿದ್ದಾರೆ. ದನಗಳು ರಸ್ತೆಯಲ್ಲೇ ಮಲಗುವುದರಿಂದ ವಾಹನಗಳು ಅಪಘಾತಕ್ಕೀಡಾಗಿ ಅನೇಕರು ಗಾಯಗೊಂಡಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳು ದನಗಳನ್ನು ರಸ್ತೆಯಿಂದ ಕರೆದೊಯ್ಯಲು ನೊಟೀಸ್ ನೀಡಲಾಗಿದೆ. ಆದರೆ ಯಾವುದೇ ಪ್ರಾಣಿಗಳ ಮಾಲೀಕರಿಗೆ ದಂಡವಿದಿಸಿಲ್ಲ ಎನ್ನುವ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.

ಪಾಲಿಕೆ ಅಧಿಕಾರಿಗಳು ಬೀದಿ ನಾಯಿಗಳನ್ನು ಹಿಡಿದು ಸ್ಥಳಾಂತರಿಸುವ ಇಲ್ಲವೇ ಅವುಗಳ ಇನ್ನಿತರ ನಿಯಂತ್ರಣ ಕೇವಲ ಸಭೆಗಳನ್ನು ಮಾಡುತ್ತಿದ್ದು ಆದರೆ ಪಾಲಿಕೆ ಮತ್ತು ಪಶು ಸಂಗೋಪನೆ ಇಲಾಖೆಯಿಂದ ಎಬಿಸಿ ಕಾರ್ಯಕ್ರಮದ ಮೂಲಕ ಶ್ವಾನಗಳಿಗೆ ಹ್ಯಾಂಟಿ ರ‌್ಯಾಬೀಸ್ ನೀಡಿ, ಬೀದಿ ನಾಯಿಗಳನ್ನು ಪೋಷಣೆ ಮಾಡಿ ಕ್ಯಾಸಿಸಿಯನ್ ಶಸ್ತ್ರಚಿಕಿತ್ಸೆ ಮಾಡಬೇಕು. ಈ ಒಂದು ಶಸ್ತ್ರ ಚಿಕಿತ್ಸೆಗೆ ಸುಮಾರು 4 ರಿಂದ 5 ಸಾವಿರ ಖರ್ಚಾಗುತ್ತಿದ್ದು ಅದರಿಂದ ಚಿಕಿತ್ಸೆ ನೀಡದೆ ಕೇವಲ ರ‌್ಯಾಬೀಸ್‌ಇಂಜೆಕ್ಷನ್ ನೀಡಲಾಗುತ್ತಿರುವುದರಿಂದ ಶ್ವಾನಗಳ ಸಂಖ್ಯೆ ಕಡಿಮೆಯಾಗುತಿಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿ 2019 ರ ಗಣತಿ ಪ್ರಕಾರ 31,451 ಬೀದಿ ನಾಯಿಗಳಿವೆ. ಅದರಲ್ಲಿ ರಾಯಚೂರು ನಗರದವೊಂದರಲ್ಲೇ ಸುಮಾರು 4 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಈ ನಾಯಿಗಳ ಭಯಕ್ಕೆ ವೃದ್ದರು , ಸಾರ್ವಜನಿಕರು ಸಹ ರಸ್ತೆಯಲ್ಲಿ ಓಡಾಡದಂಥ ಸ್ಥಿತಿಯಂತೂ ನಿರ್ಮಾಣ ವಾಗಿದೆ.

ನಗರದಲ್ಲಿ ಬಿದಿನಾಯಿಗಳ ಹಾವಳಿ ನಿಯಂತ್ರಣ ಮಾಡಲು ಈಗಾಗಲೇ ಸೂಕ್ತ ಕ್ರಮ ಕೈಗೊಳ್ಳಲಾಗುವುದು.ಜತೆಗೆ ಎಬಿಸಿ ಕಾರ್ಯಕ್ರಮದ ಮೂಲಕ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಿಸಲು ರೀ ಟೆಂಡರ್ ಕರೆಯಲಾಗುತ್ತದೆ.

ಜುಬೆನ್ ಮೊಹಾಪಾತ್ರ ಆಯುಕ್ತರು ಮಹಾನಗರ ಪಾಲಿಕೆ ರಾಯಚೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net