ಬಳ್ಳಾರಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ಫಲವಾಗಿ ಬೆಲೆ ಏರಿಕೆಯ ಬಿಸಿಯಿಂದ ಜನಸಾಮಾನ್ಯರು ತತ್ತರಿಸುತ್ತಿದ್ದಾರೆ ಎಂದು ಎಸ್‌ಯುಸಿಐ ಜಿಲ್ಲಾಸಮಿತಿ ಸದಸ್ಯ ಡಾ.ಎನ್.ಪ್ರಮೋದ್ ಹೇಳಿದರು.
ನಗರದ ಕೌಲ್‌ಬಜಾರ್‌ನಲ್ಲಿ ಮೇ 14 ರಂದು ರಾಜ್ಯಮಟ್ಟದ ಹೋರಾಟದ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಎರಡು ದಿನಗಳ ಕಾಲ ಎಸ್‌ಯುಸಿಐ ಜಿಲ್ಲಾ ಸಮಿತಿಯಿದ ಬೀದಿ ಬದಿ ಸಭೆಯಲ್ಲಿ ಮಾತನಾಡಿದರು. ಜೀವನ ನಡೆಸುವುದೇ ಅಸಾಧ್ಯ ಎನ್ನುವ ಪರಿಸ್ಥಿತಿಯಿದೆ. ಇನ್ನೊಂದೆಡೆ ಜನರ ಆದಾಯ ದಿನೇ ದಿನೇ ಕುಂಠಿತವಾಗುತ್ತಿದೆ. ಸಾಲಗಳನ್ನು ಮಾಡಿಕೊಂಡು, ಸಾಲಗಳನ್ನು ತೀರಿಸಲಾಗದೆ, ಇಡೀ ಕುಟುಂಬಗಳೇ ಆತ್ಮಹತ್ಯೆ ಮಾಡಿಕೊಳ್ಳುವ ಘಟನೆಗಳು ಸಾಕಷ್ಟು ನೋಡುತ್ತಿದ್ದೆವೆ. ಶಿಕ್ಷಣ ಹಾಗೂ ಆರೋಗ್ಯ ಸಂಪೂರ್ಣ ವ್ಯಾಪಾರದ ಸರಕಾಗಿವೆ. ರಾಜ್ಯ ಸರ್ಕಾರ 6ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ. ಹದಗೆಟ್ಟಿದ ಸರ್ಕಾರಿ ಆಸ್ಪತ್ರೆಗಳ ಪರಿಸ್ಥಿತಿಯಿಂದ ಬಾಣಂತಿಯರ ಸಾವಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.