ಜನ ಜಾಗೃತರಾದರೆ ವ್ಯವಸ್ಥೆ ಸುಧಾರಣೆ

14 BGV Jaggu 5A-Web
ಬೆಳಗಾವಿ ತಾಲೂಕಿನ ಮೊದಗಾ ಗ್ರಾಮದಲ್ಲಿ ಮೊದಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ ಶನಿವಾರ ಚಾಲನೆ ನೀಡಿದರು. ಗಂಗಣ್ಣ ಕಲ್ಲೂರ, ಕೇಸರಖಾನ್ ಮುಲ್ಲಾ, ಯಲ್ಲಪ್ಪ ಮುಗಳಿ, ಬಾಬು ಕಾಳೆ, ಪ್ರಕಾಶ ದಾನೋಜಿ, ಕಲ್ಲಪ್ಪ ಕಮ್ಮಾರ ಇತರರಿದ್ದರು.
Published on

ಬೆಳಗಾವಿ : ಯುವಕರು ರಾಜಕೀಯ ಪ್ರಜ್ಞೆ ಬೆಳಸಿಕೊಂಡು, ನಮ್ಮ ಗ್ರಾಮ, ನಮ್ಮ ಸಮಾಜಕ್ಕೆ ಏನು ಬೇಕು ಎನ್ನುವುದನ್ನು ಗಟ್ಟಿಯಾಗಿ ಮಂಡಿಸುವ ಮನೋಭಾವ ರೂಡಿಸಿಕೊಳ್ಳಬೇಕು. ಯುವಜನತೆ ಜಾಗ್ರತರಾದರೆ ಮಾತ್ರ ವ್ಯವಸ್ಥೆ ಸುಧಾರಿಸಲು ಸಾಧ್ಯ ಎಂದು ಕಾಂಗ್ರೆಸ್ ಮುಖಂಡ, ಹರ್ಷ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಚನ್ನರಾಜ ಹಟ್ಟಿಹೊಳಿ ಹೇಳಿದ್ದಾರೆ.

ತಾಲೂಕಿನ ಮೊದಗಾ ಗ್ರಾಮದಲ್ಲಿ ಶನಿವಾರ ಮೊದಗಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿನ ಆಗುಹೋಗುಗಳ ಬಗ್ಗೆ ಸಮಾನ ಮನಸ್ಕರೊಂದಿಗೆ ಚರ್ಚಿಸಿ, ಒಳಿತು ಮಾಡುವ ಯೋಚನೆಯಲ್ಲಿರಬೇಕು ಎಂದರು. ಯುವಪೀಳಿಗೆ ಮೊಬೈಲ್, ಕಂಪ್ಯೂಟರ್, ಸಾಮಾಜಿಕ ಜಾಲ ತಾಣಗಳಿಗೆ ಅಂಟಿಕೊಂಡಿದೆ. ಅವುಗಳ ಬಳಕೆ ಕಡಿಮೆ ಮಾಡಿ, ಮೈದಾನಕ್ಕಿಳಿದು ಮೈ, ಮನ ದಣಿಯುವಂತಹ ಆಟವಾಡಿದಾಗ ಮಾತ್ರ ಆರೋಗ್ಯ ಉತ್ತಮವಾಗಿರಲು ಸಾಧ್ಯ. ಕ್ರೀಡೆಗಳು ನಮ್ಮ ಮೈ, ಮನಸ್ಸುಗಳಿಗೆ ಹಿತ ನೀಡುವ ಮೂಲಕ ಆರೋಗ್ಯ ಸದೃಢಗೊಳ್ಳುತ್ತದೆ ಎಂದರು. 3 ವರ್ಷದಿಂದ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಮೂಲಾಗ್ರ ಬದಲಾವಣೆ ತರುತ್ತಿದ್ದಾರೆ. ಯುವ ಜನರು ಇಂತಹ ಜನಪ್ರತಿನಿಧಿಯನ್ನು ನಿರಂತರ ಬೆಂಬಲಿಸಿ, ಪ್ರೋತ್ಸಾಹಿಸ ಬೇಕು ಎಂದರು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗಂಗಣ್ಣ ಕಲ್ಲೂರ, ಕೇಸರಖಾನ್ ಮುಲ್ಲಾ, ಯಲ್ಲಪ್ಪ ಮುಗಳಿ, ಬಾಬು ಕಾಳೆ, ಪ್ರಕಾಶ ದಾನೋಜಿ, ಕಲ್ಲಪ್ಪ ಕಮ್ಮಾರ, ಬಸವರಾಜ ಕಲ್ಲೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net