ಜನರಿಗೆ ಉತ್ತಮ ಚಿಕಿತ್ಸೆ ಲಭ್ಯ

29GKK2
Published on

ಕೌಜಲಗಿ: ಈ ಭಾಗದಲ್ಲಿ ಬಡ ರೋಗಿಗಳಿಗೆ ನುರಿತ ತ ವೆದ್ಯರಿಂದ ಸಮುದಾಯ ಆರೋಗ್ಯ ಕೇಂದ್ರದಿಂದ ಉತ್ತಮ ಆರೋಗ್ಯ ಸೇವೆ ಸಿಗಲಿದ್ದು, ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಪಟ್ಟಣದಲ್ಲಿ ಮಂಗಳವಾರ 12 ಕೋಟಿ ರೂಪಾಯಿ ವೆಚ್ಚದ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಇಲ್ಲಿ ಉತ್ತಮ ವೆದ್ಯಕಿಯ ಚಿಕಿತ್ಸೆ ಸಿಗುವುದರಿಂದ ಬಡರೋಗಿಗಳಿಗೆ ವರದಾನವಾಗಲಿದೆ. ಖಾಲಿ ಇರುವ ಸಿಬ್ಬಂದಿ ಭರ್ತಿ ಮಾಡಲು ಕ್ರಮ ಕೆಗೊಳ್ಳಲಾಗುವುದು. ಮುಂಬರುವ ದಿನಗಳಲ್ಲಿ ವೆದ್ಯಕಿಯ ಸಿಬ್ಬಂದಿಗೆ ವಸತಿ ಗಹ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ಸುಮಾರು 58 ಲ ರೂ. ವೆಚ್ಚದಲ್ಲಿ ರ್ನಿಚರ್​ ಕೆಲಸ ಮಾಡಬೇಕಿದ್ದು, ಬೇಗ ಆಗಲಿದೆ. ಹಳ್ಳಿಗಳಲ್ಲಿ ಸೌಲಭ್ಯ ಕಲ್ಪಿಸಿದರೂ ವೆದ್ಯರು ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ. ಸೇವೆ ಸಲ್ಲಿಸಲಿಕ್ಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಿದರು.

ಅಭಿವದ್ಧಿ ದಷ್ಟಿಯಿಂದ ಹೊಸ ಜಿಲ್ಲೆಗಳು ರಚನೆಯಾದರೆ ಒಳ್ಳೆಯದು. ಅದರ ಜತೆಗೆ ಕೌಜಲಗಿ ಹೊಸ ತಾಲ್ಲೂಕು ಕೇಂದ್ರವನ್ನಾಗಿ ಮಾಡುವಂತೆಯೂ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.

ಅರಭಾವಿ ೇತ್ರದ ರಸ್ತೆಗಳ ಸುಧಾರಣೆಗಾಗಿ ಲೋಕೋಪಯೋಗಿ ಸಚಿವ ಸತೀಶ್​ ಜಾರಕಿಹೊಳಿ ಈಗಾಗಲೇ 30 ಕೋಟಿ ರೂಪಾಯಿ ನೀಡಿದ್ದಾರೆ. ಇನ್ನೂ 30 ಕೋಟಿ ರೂಪಾಯಿ ಕೊಡುವ ಭರವಸೆ ನೀಡಿದ್ದಾರೆ. ಇದರಿಂದ ಪ್ರಮುಖ ರಸ್ತೆಗಳು ಅಭಿವದ್ಧಿ ಆಗಲಿವೆ ಎಂದು ತಿಳಿಸಿದರು.

ಮಳೆಯು ಆಗುತ್ತಿರುವುದರಿಂದ ಹಿಡಕಲ್​ ಜಲಾಶಯದ ನೀರಿನ ಮಟ್ಟವು ತುಂಬಿ ತುಳುಕುತ್ತಿದೆ. ಹೆಚ್ಚಾದ ನೀರನ್ನು ರೆತರ ಹಿತಕ್ಕಾಗಿ ಈಗಾಗಲೇ ಹರಿಸಲಾಗುತ್ತಿದೆ. ರೈತರು ಅಗತ್ಯ ನೀರು ಬಳಕೆ ಮಾಡಿಕೊಳ್ಳಬೇಕು. ವಿನಾಕಾರಣ ಪೋಲು ಮಾಡಬಾರದು ಎಂದರು.

ಗ್ರಾಪಂ ಅಧ್ಯೆ ಯಲ್ಲವ್ವ ಈಟಿ, ಮುಖಂಡರಾದ ಡಾ. ರಾಜೇಂದ್ರ ಸಣ್ಣಕ್ಕಿ, ಮಹಾದೇವಪ್ಪ ಭೋವಿ, ಎ.ಕೆ.ನಾಯಿಕ, ಪರಮೇಶ್ವರ ಹೊಸಮನಿ, ರವೀಂದ್ರ ಪರುಶೆಟ್ಟಿ, ಅಶೋಕ ನಾಯಿಕ, ವಿಠ್ಠಲ ಸವದತ್ತಿ, ಬೆಳಗಾವಿ ಡಿಎಚ್​ಒ ಡಾ. ಐ.ಪಿ.ಗಡಾದ, ಚಿಕ್ಕೋಡಿ ಎಡಿಎಚ್​ಒ ಡಾ. ಎಸ್​.ಎಸ್​.ಗಡೇದ, ಗೋಕಾಕ ಟಿಎಚ್​ಒ ಡಾ. ಎಂ.ಎಸ್​.ಕೊಪ್ಪದ, ನೀಲಪ್ಪ ಕೇವಟಿ, ವೆಂಕಟೇಶ ದಳವಾಯಿ, ಶಿವಲೀಲಾ ಕುಂದರಗಿ, ಎಸ್​.ಬಿ.ಕೌಜಲಗಿ, ಗ್ರಾಪಂ ಸದಸ್ಯರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net