ಜಿಲ್ಲೆಯ ವಿವಿಧೆಡೆ ವರುಣಾಗಮನ

13SND-04
Published on

ಸಿಂಧನೂರು: ತಾಲೂಕಿನ ವಿವಿಧೆಡೆ ಶನಿವಾರ ಸಾಧಾರಣ ಮಳೆ ಸುರಿದಿದ್ದು, ವೆಂಕಟೇಶ್ವರ ಕ್ಯಾಂಪ್ ಹತ್ತಿರ ಶನಿವಾರ ಸಿಡಿಲು ಬಡಿದು ಕುರಿಗಾಹಿ ಮೃತಪಟ್ಟಿದ್ದಾರೆ. ಅಮರಾಪುರ ಗ್ರಾಮದ ಶಾಂತಪ್ಪ ಮಾವಿನಮಡ್ಗು (25) ಮೃತ.

ಕಳೆದ 15 ದಿನಗಳಿಂದ ಹೆಚ್ಚಿದ್ದ ಬಿಸಿಲಿನ ಝಳದಿಂದ ಜನರು ತತ್ತರಿಸಿದ್ದರು. ತಂಪು ವಾತಾವರಣ ಬಿಸಿಲಿನ ಝಳದಿಂದ ತತ್ತರಿಸಿದ್ದ ಜನರಲ್ಲಿ ಸಂತಸ ಮೂಡಿಸಿದೆ. ಶನಿವಾರ ಮಧ್ಯಾಹ್ನ ಗುಡುಗು-ಸಿಡಿಲು ಸಹಿತ ಬಿದ್ದ ಸಾಧಾರಣ ಮಳೆ ಭೂಮಿಗೆ ತಂಪೆರೆದಿದೆ. ವಿರೂಪಾಪುರ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ತೆಂಗಿನ ಮರಕ್ಕೆ ಸಿಡಿಲು ಬಿದ್ದಿದೆ. ಇದರಿಂದ ತೆಂಗಿನ ಮರಕ್ಕೆ ಬೆಂಕಿ ಹೊತ್ತಿಕೊಂಡಿದೆ. ಸಮೀಪದಲ್ಲಿ ಮನೆಗಳಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net