

ಚಿಕ್ಕೋಡಿ: ರವಳನಾಥ ಸಂಸ್ಥೆಯು ಹಲವಾರು ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳುವ ಮೂಲಕ ಜನರನ್ನು ಮಾನಸಿಕವಾಗಿ ಶ್ರೀಮಂತರನ್ನಾಗಿಸುವ ಕೆಲಸ ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ಕಾರ್ಯದರ್ಶಿ ಡಾ.ಜ್ಞಾನೇಶ್ವರ ಮುಳೆ ಹೇಳಿದರು. ಪಟ್ಟಣದಲ್ಲಿ ರವಳನಾಥ ಹೌಸಿಂಗ್ ಫೈನಾನ್ಸ್‌ನ 14ನೇ ಶಾಖೆ ಸೋಮವಾರ ಉದ್ಘಾಟಿಸಿ ಮಾತನಾಡಿ, ರಾವಳನಾಥ ಸೊಸೈಟಿ ಕಷ್ಟದಲ್ಲಿದ್ದ ಜನರ ಕೈ ಹಿಡಿದು ಸಹಾಯ ಮಾಡಿದೆ ಎಂದರು. ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ದೇಶದ ಅಭಿವೃದ್ಧಿಯಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಮಹತ್ತರವಾಗಿದೆ ಎಂದು ನುಡಿದರು. ರಾಜ್ಯ ಸೌಹಾರ್ದ ಒಕ್ಕೂಟದ ಸಂಚಾಲಕ ಜಗದೀಶ ಕವಟಗಿಮಠ ಮಾತನಾಡಿ, ರವಳನಾಥ ಸಂಸ್ಥೆಯಿಂದ ಚಿಕ್ಕೋಡಿ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಸಂಸ್ಥಾಪಕ ಎಂ.ಎಲ್.ಚೌಗುಲೆ ಮಾತನಾಡಿ, ಸೊಸೈಟಿ 13,288 ಸದಸ್ಯರನ್ನು ಹೊಂದಿದ್ದು, 470 ಕೋಟಿ ರೂ. ಠೇವಣಿ, 349 ಕೋಟಿ ರೂ. ಸಾಲ ನೀಡಿದೆ ಎಂದು ಮಾಹಿತಿ ನೀಡಿದರು. ಸಂಸ್ಥೆಯ ಉಪಾಧ್ಯಕ್ಷೆ ಮೀನಾ ರಿಂಗಾನೆ, ಚಿಕ್ಕೋಡಿ ಶಾಖಾ ಸಲಹಾ ಸಮಿತಿ ಅಧ್ಯಕ್ಷ ಜೈಪಾಲ್ ಬೋಕೆ, ಬಿಇಒ ಡಿ.ಕೆ.ಮಾಯದೇವ, ಸುನೀಲ ಕಾಜಗಾರ, ಭೀಮಪ್ಪ ಮಾಳಿ, ಪ್ರಶಾಂತ ವರ್ದಾಯಿ, ಗುರುಪಾದ ಮರಿಗುದ್ದಿ, ಗುರುರಾಜ ಯಳವತಿಮಠ, ಮಲ್ಲಿಕಾರ್ಜುನ ಮುಗೇರಿ, ಮಹೇಂದ್ರ ಶಹಾ, ಗೋವಿಂದ ಜೋಶಿ, ಮಾಜಿ ಮೇಯರ್ ಪ್ರವೀಣ ಕಾಂಬಳೆ, ಡಾ.ಜಯಶ್ರೀ ನಾಗರಳ್ಳಿ, ಎಚ್.ಎಸ್.ನಸಲಾಪುರೆ, ವೀರಗೌಡ ಪಾಟೀಲ ಇತರರಿದ್ದರು.23-30