ಜನರಿಗೆ ಸರ್ಕಾರದ ಸಾಧನೆ ತಿಳಿಸಿ

11KTR 1-Web
ಕಿತ್ತೂರ ಮಂಡಳ ಅಧ್ಯಕ್ಷ ಡಾ. ಬಸವರಾಜ ಪರವಣ್ಣವರ, ಬಿಜೆಪಿ ಮುಖಂಡರಾದ ಬಿ.ಎಫ್.ಕೊಳದೂರ, ಶ್ರೀಕರ ಕುಲಕರ್ಣಿ, ಸರಸ್ವತಿ ಹೈಬತ್ತಿ, ಸುವರ್ಣಾ ಹಂಜಿ, ಸಾವಿತ್ರಿ ಹೊನ್ನನವರ, ಮಲ್ಲಿಕಾರ್ಜುನ ಕುಲಕರ್ಣಿ, ಕಿರಣ ಪಾಟೀಲ, ಸುಭಾಷ ರಾವಳ, ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಸಿದ್ರಾಮನಿ, ಶಿವಾನಂದ ಹನುಮಸಾಗರ, ಈರಣ್ಣ ವಾರದ ಇತರರು ಇದ್ದರು.
Published on

ಚನ್ನಮ್ಮನ ಕಿತ್ತೂರು: ಪಕ್ಷವನ್ನು ನಾವು ಬೆಳೆಸಿದರೆ ಪಕ್ಷ ನಮ್ಮನ್ನು ಬೆಳೆಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಾಧನೆಗಳನ್ನು ಕಾರ್ಯಕರ್ತರು ಮನೆ ಮನೆಗೆ ತಲುಪಿಸಬೇಕು ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಹೇಳಿದ್ದಾರೆ.

ಸಮೀಪದ ಕುಲವಳ್ಳಿಯ ಪೇಪರ್‌ಮಿಲ್ ಪ್ಲಾಂಟೇಶನ್‌ನಲ್ಲಿ ಬುಧವಾರ ನಡೆದ ಎರಡು ದಿನಗಳ ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆ, ಕಿತ್ತೂರ ಮಂಡಲದ ಪ್ರಶಿಕ್ಷಣ ವರ್ಗ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ಶಿಸ್ತಿನ ಪಕ್ಷವಾಗಿದ್ದು, ವಿಶ್ವದಲ್ಲಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಪಕ್ಷದ ಖ್ಯಾತಿಗೆ ತಕ್ಕದಾಗಿ ಕೆಲಸ ಮಾಡಲು ನಾವು ಸದಾ ಸನ್ನದ್ಧವಾಗಿರಬೇಕೆಂದು ಹೇಳಿದರು.

ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ಪಕ್ಷವನ್ನು ಬೇರುಮಟ್ಟದಿಂದ ಕಟ್ಟಿ ಬೆಳೆಸಲು ನಾವೆಲ್ಲ ಪ್ರತಿನಿತ್ಯ ಅತ್ಯಂತ ಚುರುಕಿನಿಂದ ಕೆಲಸ ಮಾಡಬೇಕು. ಪಕ್ಷ ವಹಿಸಿದ ಜವಾಬ್ದಾರಿಗಳನ್ನು ತಪ್ಪದೇ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಪಕ್ಷ ಸಂಘಟನೆಗೆ ತುಂಬಾ ಸಹಕಾರಿಯಾಗುತ್ತದೆ. ನಿತ್ಯವೂ ನಾವು ಪಕ್ಷದ ಶಿಸ್ತಿನ ಸಿಪಾಯಿಗಳಾಗಿರಬೇಕೆಂದು ಕರೆ ನೀಡಿದರು.

ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರದ ಸಾಧನೆಗಳನ್ನು ತಿಳಿಸಿದರು. ಜಿಲ್ಲಾ ಪ್ರಶಿಕ್ಷಣ ವರ್ಗದ ಸಂಚಾಲಕ ಸಂದೀಪ ದೇಶಪಾಂಡೆ, ಕಿತ್ತೂರ ಪ.ಪಂ. ಅಧ್ಯಕ್ಷ ಹನುಮಂತ ಲಂಗೋಟಿ, ದಿಲೀಪ ವೇರಣೆಕರ, ರಾಜು ಚಿಕ್ಕನಗೌಡರ, ಲೀಲಾ ಟೋಪಣ್ಣವರ ಹಾಗೂ ಉಜ್ವಲಾ ಬಡವಾಣಾಚೆ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net