

ದಾಂಡೇಲಿ: ರಾಜ್ಯದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿರುವ ವಿದ್ಯುತ್ ಇಲಾಖೆ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಸಿಬ್ಬಂದಿಯ ದಕ್ಷತೆಯ ಕಾರ್ಯದಿಂದ ವಿದ್ಯುತ್ ಇಲಾಖೆಯ ಗ್ರಾಹಕರ ದೂರುಗಳು ಇತ್ತೀಚೆಗೆ ಕಡಿಮೆಯಾಗಿವೆ ಎಂದು ಶಾಸಕ ಆರ್.ವಿ ದೇಶಪಾಂಡೆ ಹೇಳಿದರು.
ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ದಾಂಡೇಲಿ ಹೆಸ್ಕಾಂ ವಿಭಾಗ ಕಚೇರಿಯ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಹೆಸ್ಕಾಂ ಅಧ್ಯಕ್ಷ ಸೈಯ್ಯದ್ ಅಜೀಮಪೀರ್ ಖಾದ್ರಿ ಮಾತನಾಡಿ, ದಾಂಡೇಲಿಯ ಹೆಸ್ಕಾಂ ವಿಭಾಗೀಯ ಕಚೇರಿ 7.50 ಕೋಟಿ ರೂ.ಗಳ ವೆಚ್ಚದಲ್ಲಿ ಸುಸುಜ್ಜಿತವಾಗಿ ನಿರ್ವಣಗೊಂಡಿದೆ. ಕಟ್ಟಡದ ಸ್ವಚ್ಛತೆ ಹಾಗೂ ಗುಣಮಟ್ಟವನ್ನು ಸಿಬ್ಬಂದಿಯು ಕಾಯ್ದುಕೊಂಡು ಹೋಗಬೇಕು. ಮುಂಬರುವ ದಿನಗಳಲ್ಲಿ ಲೈನ್ವೆುೖನ್ಗಳಿಗೆ ಇನ್ನಷ್ಟು ಸೌಲಭ್ಯ ಒದಗಿಸುವಲ್ಲಿ ಶಾಸಕ ದೇಶಪಾಂಡೆಯವರು ಮುಖ್ಯ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಬೇಕು ಎಂದು ಮನವಿ ಮಾಡಿದರು. ನಗರಸಭೆ ಅಧ್ಯಕ್ಷ ಅಶ್ಪಾಕ್ ಶೇಖ್, ಉಪಾಧ್ಯಕ್ಷೆ ಶಿಲ್ಪಾ ಕೊಡೆ, ಸ್ಥಾಯಿ ಸಮಿತಿ ಅಧ್ಯಕ್ಷ ಸುಧಾ ರಾಮಲಿಂಗ, ಹೆಸ್ಕಾಂ ನಿದೇರ್ಶಕ ಎಸ್. ನಾಗರಾಜ, ದೀಪಕ ಬಾಬು ಕಾಮತ, ಇಂಜಿನಿಯರ್ ಪಿ. ಮಂಜುನಾಥ, ಎಸ್. ಜಗದೀಶ, ತಹಸೀಲ್ದಾರ್ ಶೈಲೇಶ ಪರಮಾನಂದ, ನಗರಸಭೆ ಪೌರಾಯುಕ್ತ ವಿವೇಕ ಬನ್ನೆ, ಮೋಹನ ಹಲವಾಯಿ, ಡಿವೈಎಸ್ಪಿ ಶಿವಾನಂದ ಮದರಖಂಡಿ ಇತರರು ಉಪಸ್ಥಿತರಿದ್ದರು. ಎಸ್. ಜಗದೀಶ ಪ್ರಾಸ್ತಾವಿಕವಾಗಿ ಮಾತನಾಡಿದರು. ಪುರುಷೋತ್ತಮ ಮಲ್ಯಾ ಹಾಗೂ ಕುಮಾರ ಕೆ. ಕಾರ್ಯಕ್ರಮ ನಿರ್ವಹಿಸಿದರು.