

ಮುಗಳಿಹಾಳ: ಜನಸ್ನೇಹಿ ಪೊಲೀಸ್ ವ್ಯವಸ್ಥೆ ನಿರ್ಮಿಸುವ ಮಹತ್ತರ ಉದ್ದೇಶದಿಂದ ಸರ್ಕಾರ "ಮನೆ ಮನೆಗೆ ಪೊಲೀಸ್' ಅಭಿಯಾನ ಆರಂಭಿಸಿದೆ ಎಂದು ಪಿಎಸ್ಐ ಲಕ್ಷ$್ಮ್ಮಣ ಮಾಳಿ ಹೇಳಿದರು.
ಗ್ರಾಮದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮನೆ ಮನೆಗೆ ಪೊಲೀಸ್ ಅಭಿಯಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಜಾಗೃತಿ ಅಭಿಯಾನದಿಂದ ಸಾರ್ವಜನಿಕರು ಮತ್ತು ಪೊಲೀಸರ ಮಧ್ಯೆ ಭ್ರಾತೃತ್ವ ಮತ್ತು ವಿಶ್ವಾಸ ವೃದ್ಧಿಸಲು ಸಹಾಯಕವಾಗಲಿದೆ. ಪೊಲೀಸ್ ಅಧಿಕಾರಿಗಳು ಪ್ರತಿ ಮನೆ ಮನೆಗೂ ಭೇಟಿ ನೀಡಿ, ನಿವಾಸಿಗಳ ಸಮಸ್ಯೆಗಳಿಗೆ ಧ್ವನಿಯಾಗಲಿದ್ದಾರೆ. ಜತೆಗೆ ಸುರತೆ ಹಾಗೂ ಭದ್ರತಾ ಕ್ರಮಗಳ ಕುರಿತಾಗಿ ಮಾರ್ಗದರ್ಶನ ಮಾಡುತ್ತಾರೆ ಎಂದು ಮಾಹಿತಿ ನೀಡಿದರು.
ನಿಂಗಪ್ಪ ದಳವಾಯಿ, ಯಲ್ಲಪ್ಪ ದಳವಾಯಿ, ಬಸವರಾಜ ದಳವಾಯಿ, ಸಿದ್ದು ಬಡಿಗೇರ, ಮಾರುತಿ ಮಾದರ, ಈರಪ್ಪ ನಾವಿ, ಚಂಬಣ್ಣ ಗಾಣಿಗೇರ, ವಿಠ್ಠಲ ದಳವಾಯಿ, ಪೋಲಿಸ್ ಸಿಬ್ಬಂದಿ ವಿಠ್ಠಲ ಭಾಂಗಿ ಇತರರಿದ್ದರು.