ಪಾಲಿಕೆಯಿಂದ ಜನಸ್ನೇಹಿ ಆಡಳಿತ

HDMC FLAG
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿರುವ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಮೇಯರ್ ರಾಮಪ್ಪ ಬಡಿಗೇರ ಧ್ವಜಾರೋಹಣ ನೆರವೇರಿಸಿದರು.

ಪಾಲಿಕೆಯಿಂದ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ನಾವೆಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಸ್ವಚ್ಛತೆ, ಆರೋಗ್ಯದ ವಿಷಯದಲ್ಲಿ ಸಾಕಷ್ಟು ಪ್ರಗತಿ ಸಾಧಿಸುವ ಅವಶ್ಯಕತೆ ಇದ್ದು, ಉಳಿದ ಪಾಲಿಕೆಗಳಿಗೆ ಮಾದರಿಯಾಗುವ ರೀತಿಯಲ್ಲಿ ಕೆಲಸ ಮಾಡೋಣ ಎಂದು ಮೇಯರ್ ರಾಮಪ್ಪ ಬಡಿಗೇರ ಹೇಳಿದರು.

ಸುಮಾರು 200 ವರ್ಷಗಳ ಹೋರಾಟದ ಫಲವಾಗಿ ನಾವು ಸ್ವಾತಂತ್ರ್ಯ ಪಡೆದಿದ್ದೇವೆ. ಈ ಸಂದರ್ಭದಲ್ಲಿ ದೇಶಕ್ಕಾಗಿ ತ್ಯಾಗ, ಬಲಿದಾನಗೈದವರನ್ನು ಸ್ಮರಿಸಬೇಕಿದೆ. ಸ್ವಾತಂತ್ರ್ಯ ದಿನಾಚರಣೆಯು ದೇಶಭಕ್ತಿ ಭಾವನೆಯನ್ನು ಹೆಚ್ಚಿಸುತ್ತದೆ ಎಂದರು.

ಪಾಲಿಕೆ ಸದಸ್ಯರಾದ ಉಮಾ ಮುಕುಂದ, ಇಮ್ರಾನ್ ಎಲಿಗಾರ, ಅರ್ಜುನ ಪಾಟೀಲ, ಚಂದ್ರಿಕಾ ಮೇಸ್ತ್ರಿ, ನಿರಂಜನ ಹಿರೇಮಠ, ಶ್ರತಿ ಚಲವಾದಿ, ಪ್ರೀತಿ ಲದವಾ, ಇತರರು ಇದ್ದರು.

ಸಹಾಯಕ ಆಯುಕ್ತ ಗಿರೀಶ ತಳವಾರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net