ವಿಪಿ ಹಾಡಿಗೆ ಕುಣಿದು ಕುಪ್ಪಳಿಸಿದ ಜನತೆ

wwwww
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ವಿದ್ಯಾಗಿರಿಯ ಜನತಾ ಶಿಕ್ಷಣ ಸಮಿತಿಯ ನೂತನ ಆಡಳಿತ ಮಂಡಳಿಯ ಸುವರ್ಣ ಮಹೋತ್ಸವ ಸಮಾರಂಭ ನಿಮಿತ್ತ ಜೆಎಸ್‌ಎಸ್ ಆವರಣದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಸಂಗೀತ ರಸಸಂಜೆಯಲ್ಲಿ ಖ್ಯಾತ ಸಂಗೀತಗಾರ ವಿಜಯಪ್ರಕಾಶ (ವಿಪಿ) ಹಾಗೂ ತಂಡದ ಹಾಡುಗಳಿಗೆ ಸಾವಿರಾರು ಜನ ಕುಣಿದು ಕುಪ್ಪಳಿಸಿದರು.
ಬೊಂಬೆ ಹೇಳುತೈತೆ ಹಾಡಿನ ಮೂಲಕ ಸಂಗೀತ ರಸಸಂಜೆ ಆರಂಭಿಸಿದ ವಿಜಯ ಪ್ರಕಾಶ, ಜೀವನ ಟಾನಿಕ್ ಬಾಟಲಿ, ಕಾಂತಾರಾ ಚಿತ್ರದ ಸಿಂಗಾರ ಸಿರಿಯೇ, ಕೊಡಗನ ಕೋಳಿ ನುಂಗಿತ್ತ, ಶಿವೋ ಹಂ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಹಾಡುಗಳು, ಸೇರಿ ಪ್ರಸಿದ್ಧ ಕನ್ನಡ ಗಾಯನಗಳ ಜತೆಗೆ ಕೆಲ ಹಿಂದಿ ಗಾಯನಗಳನ್ನು ಪ್ರಸ್ತುತಪಡಿಸಿದರು.
ವಿಜಯ ಪ್ರಕಾಶ ಗಾಯನಕ್ಕೆ ಯುವ ಸಮೂಹ ಸೇರಿ ವಯಸ್ಕರೂ ಕುಣಿದು ಕುಪ್ಪಳಿಸಿತು. ಕೊನೆಯಲ್ಲಿ ಜೈ ಹೋ..ಹಾಡಿನ ಮೂಲಕ ಕಾರ್ಯಕ್ರಮ ಸಂಪನ್ನಗೊಳಿಸಿದರು.
ವಿಜಯ ಪ್ರಕಾಶ ಜತೆಗೆ ಅನುರಾಧಾ ಭಟ್, ನೇಹಾ, ನಿಖಿಲ್ ಹಾಗೂ ಶಾಶ್ವತಿ ವಿವಿಧ ಹಾಡುಗಳನ್ನು ಪ್ರಸ್ತುಪಡಿಸಿದರು. ಅನುಶ್ರೀ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net