

ಮಡಿಕೇರಿ: ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಜಿಲ್ಲಾ ಯುವ ಒಕ್ಕೂಟ, ತಾಲೂಕು ಯುವ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಹಾಕತ್ತೂರು ತೊಂಬತ್ತುಮನೆ ತ್ರಿನೇತ್ರ ಯುವಕ ಸಂಘದ ವತಿಯಿಂದ ಆಯೋಜಿಸಿದ್ದ ಗ್ರಾಮೀಣ ಕ್ರೀಡಾಕೂಟ ಗಮನ ಸೆಳೆಯಿತು.
ತೊಂಬತ್ತುಮನೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡು ಸಂಭ್ರಮಿಸಿದರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ತೀವ್ರ ಪೈಪೋಟಿ ನೀಡಿ ಬಹುಮಾನ ಗೆದ್ದರು.
ಪುರುಷರ ಹಗ್ಗಜಗ್ಗಾಟದಲ್ಲಿ ವಿನಾಯಕ ಎ ತಂಡ(ಪ್ರ), ಎ.ವೈ.ಸಿ. ತಂಡ (ದ್ವಿ), ಮಹಿಳೆಯರ ಹಗ್ಗಜಗ್ಗಾಟದಲ್ಲಿ ಚೂರಿಕಾಡು ಗರ್ಲ್ಸ್ (ಪ್ರ), ತೊಂಬತ್ತುಮನೆ ವಿನಾಯಕ ತಂಡ (ದ್ವಿ), ಕಾಳು ಹೆಕ್ಕುವ ಬಾಲಕರ ವಿಭಾಗದಲ್ಲಿ ಮುರ್ಶಿದ್ (ಪ್ರ), ಫಹೀಮ್ (ದ್ವಿ), ಸಾತ್ವಿಕ್(ತೃ), ಬಾಲಕಿಯರ ವಿಭಾಗದಲ್ಲಿ ದಿಯಾ (ಪ್ರ), ಆಮ್ನ (ದ್ವಿ), ಮಾನ್ವಿತಾ(ತೃ) ಸ್ಥಾನ ಪಡೆದುಕೊಂಡರು.
100 ಮೀ. ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಆಶಿಕ್(ಪ್ರ), ಅಫ್ಸಲ್(ದ್ವಿ), ನಿದೀಶ್(ತೃ), ಬಾಲಕಿಯರ ವಿಭಾಗದಲ್ಲಿ ಸಮ್ನ(ಪ್ರ), ವೈಷ್ಣವಿ(ದ್ವಿ), ದಿಯಾ(ತೃ) ಸ್ಥಾನ ಪಡೆದುಕೊಂಡರು. 6 ರಿಂದ 7ನೇ ತರಗತಿ ವಿದ್ಯಾರ್ಥಿಗಳ 200 ಮೀ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಸಿನಾನ್(ಪ್ರ), ಅಫೀಸ್ (ದ್ವಿ), ಶೃಬಿನ್ ತೃತೀಯ ಸ್ಥಾನ, ಬಾಲಕಿಯರ ವಿಭಾಗದಲ್ಲಿ ಸಹಾನ(ಪ್ರ), ಪಿ.ಆರ್.ಜಸ್ಮಿತಾ(ದ್ವಿ), ಫಾತಿಮಾ (ತೃ) ಬಹುಮಾನ ಪಡೆದರು.
8 ರಿಂದ 10 ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ 200 ಮೀ. ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ಇರ್ಫಾನ್(ಪ್ರ), ನವಾಜ್(ದ್ವಿ), ಸಚಿನ್(ತೃ) ಸ್ಥಾನ, ಬಾಲಕಿಯರ ವಿಭಾಗದಲ್ಲಿ ರಕ್ಷಿತಾ(ಪ್ರ), ಅಫ್ರಿನಾ(ದ್ವಿ), ಸ್ವಾತಿ (ತೃ) ಸ್ಥಾನ ಪಡೆದುಕೊಂಡರು. 300 ಮೀ ಓಟದ ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ರಾಶಿದ್(ಪ್ರ), ಸಿರಾಜುದ್ದೀನ್(ದ್ವಿ), ಸಿಯಾಬುದ್ದೀನ್(ತೃ), ಬಾಲಕಿಯರ ವಿಭಾಗದಲ್ಲಿ ತೃಪ್ತಿ(ಪ್ರ), ರಕ್ಷಿತಾ(ದ್ವಿ) ಹಾಗೂ ದೀಪ್ತಿ (ತೃ) ಸ್ಥಾನ ಪಡೆದರು.
ಸಾರ್ವಜನಿಕರ ರಸ್ತೆ ಓಟದಲ್ಲಿ ಪುರುಷರ ವಿಭಾಗದಲ್ಲಿ ಎಂ.ಎ.ಅನ್ಸರ್(ಪ್ರ) ರಾಶಿದ್(ದ್ವಿ), ಆಶಿಕ್(ತೃ) ಸ್ಥಾನ, ಮಹಿಳೆಯರ ವಿಭಾಗದಲ್ಲಿ ರಕ್ಷಿತಾ(ಪ್ರ), ಸ್ವಾತಿ(ದ್ವಿ), ಶಿಲ್ಪಾ (ತೃ) ಬಹುಮಾನ ಪಡೆದುಕೊಂಡರು. ಸಾರ್ವಜನಿಕ ಮಹಿಳೆಯರ ಸಂಗೀತಾ ಕುರ್ಚಿ ಸ್ಪರ್ಧೆಯಲ್ಲಿ ಕುಶ್ಮಿತಾ(ಪ್ರ), ಸುಷ್ಮಾ(ದ್ವಿ), ರಮ್ಯಶ್ರೀ ತೃತೀಯ, ನಿಂಬೆ ಚಮಚ ಸ್ಪರ್ಧೆಯಲ್ಲಿ ಸುಮಾ(ಪ್ರ), ಪ್ರಮೀಳಾ(ದ್ವಿ), ಸರಸ್ವತಿ ತೃತೀಯ ಬಹುಮಾನ ಪಡೆದರು.
ಸಾರ್ವಜನಿಕರ ಗೋಣಿ ಚೀಲ ಓಟದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಶಿವ (ಪ್ರ), ಸಿಯಾಬು (ದ್ವಿ), ಬಿ.ಬಿ.ಹರೀಶ್ (ತೃ), ಸಾರ್ವಜನಿಕ ಬಸ್ ಆಟದಲ್ಲಿ ಪುರುಷರ ವಿಭಾಗದಲ್ಲಿ ಉಮೇರ (ಪ್ರ), ಕೃಷ್ಣ ಕುಟ್ಟಿ (ದ್ವಿ), ರಂಜಿತ್ (ತೃ), ಮಹಿಳೆಯರ ವಿಭಾಗದಲ್ಲಿ ಎಸ್.ಎಸ್.ಪ್ರಮಿಳಾ (ಪ್ರ), ಸಿಂಚನ (ದ್ವಿ), ದೀಕ್ಷ್ಷಾ (ತೃ) ಬಹುಮಾನ ಪಡೆದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ತೊಂಭತ್ತುಮನೆ ತ್ರೀನೇತ್ರ ಯುವಕ ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಹಾಕತ್ತೂರು ಗ್ರಾ.ಪಂ.ಉಪಾಧ್ಯಕ್ಷ ಎಚ್.ಟಿ.ಕಿರಣ, ಸದಸ್ಯ ಶೈನಿ, ತೊಂಭತ್ತುಮನೆ ಶಾಲಾಭಿವೃದ್ಧಿ ಹಾಗೂ ಮೇಲ್ತುಸ್ತುವಾರಿ ಸಮಿತಿ ಅಧ್ಯಕ್ಷ ಕೆ.ವೈ.ಜಲೀಲ್ ಇತರರು ಪಾಲ್ಗೊಂಡಿದ್ದರು.