ಸರ್ಕಾರಿ ಶಾಲೆಗಳಿಂದ ಮಾತ್ರ ಜಾನಪದ ಉಳಿಸಲು ಸಾಧ್ಯ

26sor4
ಜಿಲ್ಲಾ ೫ನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಬೇಗೂರು ಶಿವಪ್ಪ ಈಸೂರು ಅವರನ್ನು ಆನವಟ್ಟಿ ಮುಖ್ಯ ರಸ್ತೆಯಲ್ಲಿ ಎತ್ತಿನ ಗಾಡಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಯಿತು. ಡಿ.ಮಂಜುನಾಥ್, ಕಾರ್ತಿಕ್ ಸಾಹುಕಾರ್, ಖಲಂದರ್, ಶಿವಲಿಂಗೇಗೌಡ, ಅಮಿತ್ ಗೌಡ ಇತರರಿದ್ದರು.
Published on

ಸೊರಬ: ಜಾನಪದ ಎಂಬುದು ಜೀವನ ಕ್ರಮದ ಚಿತ್ರಣ. ಇಂದಿನ ಮಕ್ಕಳು ಸಂಸ್ಕೃತಿ ಜತೆಗೆ ಜಾನಪದ ಉಳಿಸಲು ಒತ್ತು ನೀಡಿದಾಗ ಕನ್ನಡತನ ಉಳಿದು ಬೆಳೆಯುತ್ತದೆ ಎಂದು ಸರ್ವಾಧ್ಯಕ್ಷ ಬೇಗೂರು ಶಿವಪ್ಪ ಈಸೂರು ಹೇಳಿದರು.
ತಾಲೂಕಿನ ಕೋಟಿಪುರದ ಎವರಾನ್ ಇಂಟರ್‌ನ್ಯಾಷನಲ್ ವಸತಿ ಶಾಲೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಕರ್ನಾಟಕ ಜಾನಪದ ಪರಿಷತ್, ಆನವಟ್ಟಿ ಹೋಬಳಿ ಘಟಕ ಹಾಗೂ ಎವರಾನ್ ಶಾಲೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶಿವಮೊಗ್ಗ ಜಿಲ್ಲಾ ೫ನೇ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಭಾಷೆ ಹಾಗೂ ಜಾನಪದ ಇಂದು ಅಳಿವಿನಂಚಿನಲ್ಲಿದೆ. ಜಾನಪದ ಉಳಿಸುವುದು ಸರ್ಕಾರಿ ಶಾಲೆಗಳಿಂದ ಮಾತ್ರ ಸಾಧ್ಯ. ಇಂದಿನ ಎಲ್ಲ ಬೆಳವಣಿಗೆಗೆ ಮೂಲವಾದ ಜಾನಪದ ಪರಂಪರೆ ಉಳಿಸಿ ಬೆಳೆಸುವ ಹೊಣೆಗಾರಿಗೆ ಯುವಜನತೆಯ ಮೇಲಿದೆ. ನಮ್ಮ ಸಂಸ್ಕೃತಿ ಸಂರಕ್ಷಣೆಗೆ ಕನ್ನಡ ಮನಸ್ಸುಗಳ ಅಗತ್ಯವಿದ್ದು ಅಂತಹ ಕೆಲಸವನ್ನು ಡಿ.ಮಂಜುನಾಥ್ ಮಾಡುತ್ತಿರುವುದು ಪ್ರಶಂಸನೀಯ ಎಂದರು.
ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾನಪದ ಕಲಾವಿದರನ್ನು ಗುರುತಿಸಿ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ವೇದಿಕೆ ಒದಗಿಸುವುದು ಅಪರೂಪದ ಕೆಲಸ. ಕರ್ನಾಟಕ ಜಾನಪದ ಪರಿಷತ್ ಆ ಕೆಲಸ ಮಾಡುತ್ತಿದೆ. ಮನುಷ್ಯನ ಉಗಮದ ಜತೆಗೆ ಜಾನಪದ ಉದಯಿಸಿ ಬೆಳೆದಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಎವರಾನ್ ಇಂಟರ್ ನ್ಯಾಷನಲ್ ವಸತಿ ಶಾಲೆಯ ಅಧ್ಯಕ್ಷ ಎಂ.ಎಸ್.ಕಾರ್ತಿಕ್ ಸಾಹುಕಾರ್ ಆಶಯ ನುಡಿಗಳನ್ನಾಡಿದರು. ಕರ್ನಾಟಕ ಜಾನಪದ ಪರಿಷತ್ ಆನವಟ್ಟಿ ಘಟಕದ ಅಧ್ಯಕ್ಷ ಖಲಂದರ್ ಸಾಬ್ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಜಡೆ ಗ್ರಾಪಂ ಅಧ್ಯಕ್ಷ ಅಮಿತ್ ಗೌಡ, ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಶಂಕರ್ ಶೇಟ್, ಯುವಜನ ಒಕ್ಕೂಟದ ತಾಲೂಕು ಸಂಚಾಲಕ ಎಚ್.ಸಿ.ಸಂಪತ್‌ಕುಮಾರ್, ಆನವಟ್ಟಿ ಕಸಾಪ ಅಧ್ಯಕ್ಷ ಬಸವನಗೌಡ ಮಲ್ಲಾಪುರ, ಚರಿತಾ ಕಾರ್ತಿಕ್, ಉಮೇಶ್ ಬಿಚ್ಚುಗತ್ತಿ, ವೆಂಕಟೇಶ್ ಕಾಮತ್, ಮೃತ್ಯುಂಜಯ ಗೌಡ, ಎಸ್.ಆರ್.ಕುಮಾರಸ್ವಾಮಿ, ಅಭಿಲಾಷ ಹುರಳಿಕೊಪ್ಪ, ಚಂದ್ರಪ್ಪ, ನಾಗರಾಜ್, ಸತೀಶ್, ಶಿವಕುಮಾರ್, ಅಜಿತ್‌ಕುಮಾರ್, ಮಂಜುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net