ಬಿಜೆಪಿ ಭಷ್ಟಾಚಾರಕ್ಕೆ ಬೇಸತ್ತ ಜನತೆ

Indi-2-1
ಇಂಡಿ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮನೆ ಮನೆಗೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್‌ನ್ನು ಶಾಸಕ ಯಶವಂತರಾಯಗೌಡ ಪಾಟೀಲ ವಿತರಿಸಿದರು. ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಜಾವೀದ್ ಮೋಮಿನ್, ಪಾಪು ಕಿತ್ತಲಿ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ ಇತರರಿದ್ದರು.
Published on

ಇಂಡಿ: ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ, ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ಬೇಸತ್ತಿದ್ದಾರೆ. ಪಕ್ಷ ಕಟ್ಟಿ ಬೆಳೆಸಿದ ಎಲ್.ಕೆ. ಅಡ್ವಾಣಿ, ಬಿ.ಎಸ್. ಯಡಿಯೂರಪ್ಪ ಅವರಂತಹ ಮಹಾನ್ ನಾಯಕರನ್ನೇ ಮೂಲೆ ಗುಂಪು ಮಾಡಿದ್ದಾರೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಆರೋಪಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಮನೆ ಮನೆಗೂ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದ್ದು, ಪಕ್ಷ ಗೆಲುವು ಸಾಧಿಸುವುದು ಪಕ್ಕಾ ಎಂದರು.

ಈ ಹಿಂದೆ ನೀಡಿದ 165 ಭರವಸೆಯಲ್ಲಿ 159 ಭರವಸೆಗಳು ಕಾಂಗ್ರೆಸ್ ಪೂರೈಸಿದೆ. ಅನೇಕ ಜನಪ್ರಿಯ ಯೋಜನೆಗಳು ಕಾಂಗ್ರೆಸ್ ಸರ್ಕಾರ ಕೊಟ್ಟಿದೆ. ಇನ್ನೂ ಈ ಬಾರಿ 2 ಲಕ್ಷ ಕೋಟಿ ರೂ. ನೀರಾವರಿ ಯೋಜನೆಗೆ 200 ಯುನಿಟ್ ವಿದ್ಯುತ್, 10 ಕೆಜಿ ಅಕ್ಕಿ ಬಡವರಿಗೆ ಉಚಿತ ನೀಡುವ ಭರವಸೆ ಯೋಜನೆಗಳು ಸಾವಿರಾರು ಕುಟುಂಬಕ್ಕೆ ಆ ಆಧಾರವಾಗುತ್ತವೆ ಎಂದು ತಿಳಿಸಿದರು.

ಅಲ್ಲದೆ, ತಾಲೂಕಿನ ಪ್ರತಿ ಗ್ರಾ.ಪಂ. ಮತ್ತು ಪ್ರತಿ ಮನೆ ಮನೆಗೆ ಈ ಯೋಜನೆ ಬಗ್ಗೆ ಜಾಗೃತಿ ಮೂಡಿಸಬೇಕು. ಪಕ್ಷದ ಕಾರ್ಯಕರ್ತರೇ ಪಕ್ಷದ ಜೀವಾಳ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೊಟ್ಟ ಎಲ್ಲ ಭರವಸೆಗಳನ್ನು ಈಡೇಸುತ್ತೇವೆ ಎಂದರು.

ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲನಗೌಡ ಬಿರಾದಾರ, ಜಾವೀದ್ ಮೋಮಿನ್, ಪಾಪು ಕಿತ್ತಲಿ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಇಲಿಯಾಸ್ ಬೊರಾಮಣಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ಕುಡಿಗನೂರ, ಯಮುನಾಜಿ ಸಾಳುಂಕೆ, ಜಟ್ಟೆಪ್ಪ ರವಳಿ, ಮುತ್ತಪ್ಪ ಪೋತೆ, ಭೀಮಾಶಂಕರ ಮೂರಮನ್, ಶೇಖು ಸಾಹುಕಾರ್ ರೂಗಿ, ಸತ್ತಾರ ಬಾಗವಾನ, ರಾಜು ಕುಲಕರ್ಣಿ, ಪ್ರಶಾಂತ ಕಾಳೆ, ಶೇಖರ ಶಿವಶರಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net