

ಕಾರಂಗುಟ್ಟೆನಾರಾಯಣಸ್ವಾಮಿ, ಕೋಲಾರ
ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ತರಕಾರಿ, ಹಣ್ಣು ಬೆಳೆದು ಕೈ ಸುಟ್ಟುಕೊಂಡ ರೈತ, ಚರ್ಮಗಂಟು ರೋಗ (ಲಿಂಪಿ ಸ್ಕಿನ್ ಡಿಸೀಸ್) ದಿಂದ 60ಕ್ಕೂ ಹೆಚ್ಚು ರಾಸುಗಳನ್ನು ಕಳೆದುಕೊಂಡು ಸಹಸ್ರಾರು ರೋಗಪೀಡಿತ ಹಸುಗಳನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿರುವ ಹೈನುಗಾರರು, ಕಳಪೆ ಕಾಮಗಾರಿಯಿಂದ ಕೆಲವೇ ದಿನಕ್ಕೆ ಹಾಳಾಗಿರುವ ರಸ್ತೆಗಳು. ಆಳುದ್ದದ ಗುಂಡಿ ರಸ್ತೆಗಳಲ್ಲಿ ಸಂಚರಿಸಲಾಗದೆ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಜನ….ಇದು ಜಿಲ್ಲೆಯ ಈಗಿನ ಸ್ಥಿತಿ.
ರಸ್ತೆಗಳು ಹಾಳಾಗಿರುವ ಕುರಿತು ಆ.28ರಂದು ‘ವಿಜಯವಾಣಿ’ ವಿಸ್ತ್ಪ್ರತ ವರದಿ ಪ್ರಕಟಿಸಿದಾಗ ಕೋಲಾರದಲ್ಲೇ ಬಿಡಾರ ಹೂಡಿ ರಸ್ತೆಗಳ ಪರಿಶೀಲನೆ ವಾಡಿ ಸರಿಪಡಿಸುವುದಾಗಿ ಭರವಸೆ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅ.10ರಿಂದ ಪರಿಶೀಲನೆಗೆ ಆಗಮಿಸಿದ್ದಾರೆ. ಆದರೆ ಮೂರು ದಿನಗಳಿಂದ ಗುತ್ತಿಗೆದಾರರು, ಅಧಿಕಾರಿಗಳ ಜತೆ ಕಡತಗಳ ಪರಿಶೀಲನೆ ಯಲ್ಲಿಯೇ ಮುಳುಗಿದ್ದಾರೆ. ಇತ್ತ ಬೆಳೆ, ಜಾನುವಾರು ಕಳೆದುಕೊಂಡು ಮೂಕ ರೋದನ ಅನುಭವಿಸುತ್ತಿರುವ ಜನ ಗೋಳು ಕೇಳಲು ಸಚಿವರು ಇಂದು ಬರುವರು, ನಾಳೆ ಬರುವರೇ ಎಂಬ ಆಸೆಯಲ್ಲಿದ್ದಾರೆ.
ಮೂಕರೋದನೆ ಅರ್ಥವಾಗುತ್ತಿಲ್ಲವೇ?: ಜಿಲ್ಲೆಯಲ್ಲಿ ಕಳೆದೆರಡು ತಿಂಗಳಿಂದ ಚರ್ಮಗಂಟು ರೋಗ ಜಾನುವಾರುಗಳನ್ನು ಪರಿಪರಿಯಾಗಿ ಕಾಡುತ್ತಿದೆ. ಸರ್ಕಾರದ ಅಂಕಿ-ಅಂಶಗಳ ಪ್ರಕಾರವೇ 60ಕ್ಕೂ ಹೆಚ್ಚು ರಾಸುಗಳು ಮತಪಟ್ಟಿವೆ. ಜಿಲ್ಲೆಯಲ್ಲಿ ಕೋಲಾರ ಹಾಲು ಒಕ್ಕೂಟಕ್ಕೆ 5.5 ಲಕ್ಷ ಕೆಜಿ ಹಾಲು ನಿತ್ಯ ಸರಬರಾಜಾಗುತ್ತಿದೆ. ಆದರೆ ರೋಗ ಬಂದ ನಂತರ 10 ಸಾವಿರ ಕೆಜಿಯಷ್ಟು ಹಾಲು ಕಡಿಮೆಯಾಗಿದೆ. ಈ ರೋಗ ಜಿಲ್ಲೆಯಾದ್ಯಂತ ಶರವೇಗದಲ್ಲಿ ಹರಡುತ್ತಿದ್ದರೂ, ಪಶು ಆಸ್ಪತ್ರೆಗಳಲ್ಲಿ 30 ಕಡೆ ವೈದ್ಯರಿಲ್ಲ, ಜಾನುವಾರು ಅಧಿಕಾರಿ, ಪರೀಕ್ಷಕ, ಸಹಾಯಕರ 190 ಹುದ್ದೆಗಳಲ್ಲಿ 119 ಹುದ್ದೆ ಖಾಲಿ ಇವೆ. ಡಿ ಗ್ರೂಪ್‌ನ 192 ಹುದ್ದೆಗಳಲ್ಲಿ 167ಹುದ್ದೆ ಭರ್ತಿಯಾಗಿಲ್ಲ. ರಾಸುಗಳಿಗೆ ಸಮರ್ಪಕವಾಗಿ ಔಷಧ, ಲಸಿಕೆ ಸಿಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಮುನಿರತ್ನ ಕನಿಷ್ಠ ಕಾಳಜಿಯಾದರೂ ತೋರಿ ರಾಸುಗಳ ರಕ್ಷಣೆಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆ. ಖಂಡಿತ ಗೋವುಗಳ ಮೂಕರೋದನ ದೂರವಾಡುತ್ತಾರೆ ಎಂಬ ಆಸೆಯಲ್ಲಿ ಹೈನುಗಾರರಿದ್ದಾರೆ.
ರಸ್ತೆಗಳ ದುರಸ್ತಿ ಯಾವಾಗ?: ಜಿಲ್ಲೆಯಲ್ಲಿ ಸಂಚಾರಕ್ಕೆ ಯೋಗ್ಯವಿಲ್ಲದ ಟೇಕಲ್, ವಾಲೂರು, ಬೇತಮಂಗಲ, ಶ್ರೀನಿವಾಸಪುರ ವಾರ್ಗಗಳು ಸೇರಿ ಕೋಲಾರ ನಗರ ಮತ್ತು ಗ್ರಾವಾಂತರ ರಸ್ತೆಗಳು ಮೊಣಕಾಲುದ್ದದ ಹಳ್ಳಗಳಿಂದ ಕೂಡಿವೆ. ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ರಸ್ತೆಗಳ ಸ್ಥಿತಿ ನರಕ ಸದೃಶವಾಗಿದೆ. ಕಾಮಗಾರಿಯಾಗಿ ವರ್ಷವೂ ಕಳೆಯದೆ ದುರಸ್ತಿ ಹೊಣೆೆ ಹೊತ್ತಿರುವ ಗುತ್ತಿಗೆದಾರರು ಕೈಚೆಲ್ಲಿ ಕುಳಿತಿದ್ದಾರೆ. ಒಂದೇ ಮಳೆಗೆ ಡಾಂಬರು ವಾಯವಾಗಿ ಹಳ್ಳಗಳು ಬಿದ್ದಿರುವುದು ಏಕೆ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಕೆ.ಆರ್.ರಮೇಶ್‌ಕುವಾರ್, ಕೆ.ವೈ. ನಂಜೇಗೌಡ, ಎಸ್.ಎನ್.ನಾರಾಯಣಸ್ವಾಮಿ, ರೂಪಕಲಾ ಮತ್ತು ಕಾಂಗ್ರೆಸ್ ಬೆಂಬಲಿತ ಕೆ.ಶ್ರೀನಿವಾಸಗೌಡ, ಬಿಜೆಪಿ ಬೆಂಬಲಿತ ಎಚ್.ನಾಗೇಶ್ ಶಾಸಕರಿದ್ದಾರೆ. ಎಂಎಲ್ಸಿಗಳಾದ ಕಾಂಗ್ರೆಸ್‌ನ ಎಂ.ಎಲ್.ಅನಿಲ್‌ಕುವಾರ್, ಜೆಡಿಎಸ್‌ನ ಇಂಚರ ಗೋವಿಂದರಾಜು, ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ಸಂಸದ ಎಸ್.ಮುನಿಸ್ವಾಮಿ ಇದ್ದಾರೆ. ಇವರಲ್ಲಿ ಕೆಲವರು ಸದನದ ಒಳಗೆ, ಹೊರಗೆ ಧ್ವನಿ ಎತ್ತುತ್ತಿದ್ದರೂ ಪ್ರಯೋಜನವಾಗಿಲ್ಲ. ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ ಒಳಜಗಳದಿಂದ ಸಮಸ್ಯೆ ಬಗೆಹರಿಯದೆ ಹಿಂದುಳಿಯುವಂತಾಗಿದೆ ಎಂಬ ವಾತು ವ್ಯಾಪಕವಾಗಿ ಕೇಳಿಬರುತ್ತಿದೆ.
ರೈತರ ಕಣ್ಣೀರೊರೆಸುವುದು ಯಾವಾಗ?: ಸೆಪ್ಟೆಂಬರ್ ಮೊದಲ ವಾರದಲ್ಲಿ 124.5ಮಿಮೀ ಮಳೆಯಾಗಿ ಟೊವ್ಯಾಟೊ ಸೇರಿ 225 ಹೆಕ್ಟೇರ್‌ನಲ್ಲಿ ರೈತರು ಬೆಳೆ ಕಳೆದುಕೊಂಡಿದ್ದರು. ಅದೇ ರೀತಿ 2021ರ ನವೆಂಬರ್‌ನಲ್ಲಿ ರಾಗಿ, 2022ರ ಮೇ ನಲ್ಲಿ ಬಿರುಗಾಳಿ ಸಮೇತ ಮಳೆಗೆ ವಾವು ನೆಲಕಚ್ಚಿತ್ತು. ಇನ್ನು ಜುಲೈ, ಆಗಸ್ಟ್ ಸೇರಿದಂತೆ ಇಲ್ಲೀ ತನಕ ಸೀಸನ್ ಇದ್ದರೂ ಟೊವ್ಯಾಟೊ ಬೆಲೆ ಇಲ್ಲದೆ ಸತತವಾಗಿ ರೈತರು ಕೈ ಸುಟ್ಟುಕೊಳ್ಳುತ್ತಿದ್ದಾರೆ. ಇದರ ನಡುವೆ ಆಗಾಗ ಮಳೆಗೆ ಟೊವ್ಯಾಟೊ ಕೊಳೆತು ಅನ್ನದಾತರಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದೆ. ಏಷ್ಯಾದಲ್ಲೇ ದೊಡ್ಡ ವಾರುಕಟ್ಟೆ ಹೊಂದಿರುವ ಜಿಲ್ಲೆಯಲ್ಲಿ ಟೊವ್ಯಾಟೊ ಬೆಳೆ ಕಟಾವು ಪ್ರಯೋಗಕ್ಕೆ ಒಳಪಟ್ಟಿರುವುದರಿಂದ ವಿಮೆ ಸಹ ರೈತನಿಗೆ ಸಿಗುತ್ತಿಲ್ಲ. ನಷ್ಟ ಪರಿಹಾರ ಸಮೀಕ್ಷೆಯನ್ನು ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆಗಳು ಜಂಟಿಯಾಗಿ ನಡೆಸಲಿಲ್ಲ. ಪರಿಹಾರ ಸಹ ಸಿಕ್ಕವರಿಗೆ ಸಿಕ್ಕಿತು, ಸಿಗದವರಿಗೆ ಇಲ್ಲ ಎನ್ನುವಂತಾಯಿತು. ಇದನ್ನೆಲ್ಲ ತೋಟಗಾರಿಕೆ ಸಚಿವ ಮುನಿರತ್ನ ಸರಿಪಡಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಅನ್ನದಾತರಿದ್ದಾರೆ.
ಜಲ್ವಂತ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿ, ಅಧಿಕಾರಿಗಳ ಜತೆ ಚರ್ಚಿಸದೆ 3 ದಿನದಿಂದ ಗುತ್ತಿಗೆದಾರರು, ಪಿಡಬ್ಲೂತ್ಯೃಡಿ ಅಧಿಕಾರಿಗಳ ಸಭೆ ವಾಡುವ ಮೂಲಕ ಉಸ್ತುವಾರಿ ಸಚಿವ ಮುನಿರತ್ನ ಜನರನ್ನು ದಾರಿತಪ್ಪಿಸುತ್ತಿದ್ದಾರೆ. ಅತಿವೃಷ್ಟಿ ಯಿಂದಾದ ನಷ್ಟ, ಗೋವುಗಳ ವಾರಣ ಹೋಮಕ್ಕೆ ಕಾರಣವಾಗಿರುವ ಚರ್ಮಗಂಟು ರೋಗಕ್ಕೆ ಪರಿಹಾರೋಪಾಯ ಕಂಡುಕೊಳ್ಳದಿರುವುದು ಸರಿಯಲ್ಲ.
ಇಂಚರಗೋವಿಂದರಾಜು, ಎಂಎಲ್ಸಿ, ಕೋಲಾರ.