ಬಿಜೆಪಿ ಸುಳ್ಳಿನ ರಾಜಕಾರಣ ಜನಕ್ಕೆ ಅರಿವಾಗಿದೆ

kota (6)
Published on

ಕೋಟ: ಕೋಟ ಬ್ಲಾಕ್ ಕಾಂಗ್ರೆಸ್ ವತಿಯಿಂದ ಶನಿವಾರ ಕೋಟತಟ್ಟು ಗ್ರಾಮ ಪಂಚಾಯಿತಿ ಎದುರು ಬಿಜೆಪಿಯವರ ಸುಳ್ಳಿನ ಪ್ರತಿಭಟನೆ ವಿರುದ್ಧ ಕಾಂಗ್ರೆಸ್ ಪಕ್ಷದ ಸತ್ಯದರ್ಶನ ಪ್ರತಿಭಟನೆ ನಡೆಸಿತು.

ವಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಭಾಗವಹಿಸಿ, ಬಿಜೆಪಿಯವರು ಸುಳ್ಳಿನ ರಾಜಕಾರಣ ವಾಡುತ್ತಿದ್ದಾರೆ ಜನರ ದಿಕ್ಕು ತಪ್ಪಿಸುವ ಪ್ರತಿಭಟನೆಗಳು ಬಿಜೆಪಿಯಿಂದಾಗುತ್ತಿದೆ ಎಂದು ಬಿಜೆಪಿ ಇತ್ತೀಚಿಗೆ ನಡೆಸಿದ ಪ್ರತಿಭಟನೆಯ ಬಗ್ಗೆ ವಿವರಣೆ ನೀಡಿ ಸಾರ್ವಜನಿಕರಿಗೆ ಸತ್ಯ ವಿಚಾರವನ್ನು ತೆರೆದಿರಲ್ಲದೆ ಗ್ಯಾರಂಟಿ ಯೋಜನೆಗಳು ಮತ್ತು ಕಾಂಗ್ರೆಸ್ ಸರ್ಕಾರದ ಅವಧಿಗಳಲ್ಲಿ ಜಾರಿಗೆ ತಂದ ಎಲ್ಲ ಯೋಜನೆಗಳನ್ನು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಎ ಕುಂದರ್, ಕೋಟ ವ್ಯವಸಾಯಕ ಸಹಕಾರಿ ಸಂ ವಾಜಿ ಅಧ್ಯಕ್ಷ ತಿಮ್ಮ ಪೂಜಾರಿ, ಗ್ರಾಮೀಣ ಸಮಿತಿ ಅಧ್ಯಕ್ಷ ಸುರೇಶ್ ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ಸಾಯಿರಬಾನು, ರೋಬರ್ಟ್ ಡಿಸೋಜ, ಮುಖಂಡರಾದ ರವಿ ಪೂಜಾರಿ, ರತ್ನಾಕರ ಶ್ರೀಯನ್ ವಿವಿಧ ಟಕ ಅಧ್ಯಕ್ಷರುಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net