ಮೈಸೂರಿನಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿಗೆ ಮುಗಿಬಿದ್ದ ಜನ

mysore
Published on

ಮೈಸೂರು: ಭಾರತ್ ಬ್ರ್ಯಾಂಡ್ ಯೋಜನೆಯಡಿ ಮಾರಾಟ ಮಾಡಲಾದ ಅಕ್ಕಿಯನ್ನು ನಗರದಲ್ಲಿ ಸೋಮವಾರ ಗ್ರಾಹಕರು ಮುಗಿಬಿದ್ದು ಖರೀದಿಸಿದರು.


ಕೇಂದ್ರ ಸರ್ಕಾರ 1 ಕೆಜಿ ಅಕ್ಕಿಗೆ 29 ರೂ.ನಂತೆ ಮಾರಾಟ ಮಾಡುತ್ತಿದ್ದು, ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಮಹಾಮಂಡಳ(ನಫೆಡ್) ಸಂಚಾರಿ ವಾಹನದ ಮೂಲಕ ಅಕ್ಕಿಯನ್ನು ವಿತರಿಸಿತು. ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆಯಿತು.


ಭಾರತ್ ಬ್ರಾೃಂಡ್ ಅಕ್ಕಿ ಮಾರಾಟಕ್ಕೆ ನಗರದಲ್ಲಿ ಸೋಮವಾರ ಶುರುವಾಗಿದೆ. ಮೊದಲ ದಿನ ಚಾಮುಂಡಿಪುರಂ ವೃತ್ತದಲ್ಲಿ ಅಕ್ಕಿಯನ್ನು ಮಾರಾಟ ಮಾಡಲಾಯಿತು. ಇದಕ್ಕೆ ಮಾಜಿ ಶಾಸಕ ಎಸ್.ಎ.ರಾಮದಾಸ್ ಚಾಲನೆ ನೀಡಿದರು. ಬಳಿಕ ಗ್ರಾಹಕರು ಸಾಲುಗಟ್ಟಿ ನಿಂತು ಅಕ್ಕಿಯನ್ನು ಕೊಂಡರು. ಪ್ರತಿ ಕೆಜಿಗೆ 29 ರೂ.ನಂತೆ 10 ಕೆಜಿಯ ಚೀಲವನ್ನು ನೀಡಲಾಯಿತು.


ಒಂದು ಲಾರಿಯಷ್ಟು ಇದ್ದ ಅಕ್ಕಿಯ ಚೀಲಗಳನ್ನು ಮಧ್ಯಾಹ್ನದಿಂದ ಸಂಜೆವರೆಗೆ ಮಾರಾಟ ಮಾಡಲಾಯಿತು. ಇದಕ್ಕಾಗಿ ಹಿರಿಯರು, ಕಿರಿಯರು, ಹೆಣ್ಣುಮಕ್ಕಳು ಸರದಿ ಸಾಲಿನಲ್ಲಿ ನಿಂತು ಖರೀದಿಸಿದರು.


145 ರೂ. ಮೊತ್ತದ 5 ಕೆಜಿ ಪ್ಯಾಕೇಟ್ ಇರಲಿಲ್ಲ. ಬರೀ 10 ಕೆಜಿ ಪ್ಯಾಕೇಟ್ ಮಾತ್ರ ಇತ್ತು. ಭಾರತ್ ಬ್ರ್ಯಾಂಡ್ ಅಡಿಯಲ್ಲಿ ಕಡ್ಲೆ ಬೇಳೆ(ಪ್ರತಿ ಕೆಜಿಗೆ 60 ರೂ.), ಗೋಧಿ ಹಿಟ್ಟು (ಪ್ರತಿ ಕೆಜಿಗೆ 27.50 ರೂ), ತೊಗರಿ (ಕೆಜಿ 93 ರೂ.) ಮಾರಾಟ ಮಾಡಲಿಲ್ಲ. ಇದರಿಂದ ಜನರಿಗೆ ನಿರಾಸೆಯಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net