

ಮುಳಬಾಗಿಲು: ಫೆಂಗಲ್ ಚಂಡಮಾರುತದ ಎೆಕ್ಟ್ ಮುಳಬಾಗಿಲಿಗೂ ತಟ್ಟಿದ್ದು, ಶೀತಗಾಳಿ, ಮಳೆಗೆ ಜನ ಹೈರಾಣಾದರೆ, ಜಾನುವಾರುಗಳು ಮೇವು ಇಲ್ಲ ಪರದಾಡಿದವು. ಬೆಳೆದ ಬೆಳೆಗಳು ಬಿರುಗಾಳಿ ಮಳೆಗೆ ನೆಲ ಕಚ್ಚಿದ್ದು, ರೈತರು ನಷ್ಟಭಯಕ್ಕೆ ಸಿಲುಕಿದ್ದಾರೆ.
ವಿಪರೀತ ಥಂಡಿ ವಾತಾವರಣದಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಹಲವರು ಅರೋಗ್ಯದಲ್ಲಿ ಏರುಪೇರಾದರೂ ಆಸ್ಪತ್ರೆಗಳಿಗೆ ಹೋಗಿ ಬರಲು ಮಳೆ ಬಿಡುವು ಕೊಡುತ್ತಿಲ್ಲ. ಕುರಿಮೇಕೆ ಸೇರಿ ಹಸು ಎತ್ತು, ಎಮ್ಮೆ ಸೇರಿ ಜಾನುವಾರುಗಳನ್ನು ಬಯಲಿನಲ್ಲೇ ಮೇಯಿಸಿಕೊಂಡು ಬರುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು.
ಮಳೆಗೆ ತೋಟಗಾರಿಕೆ ಸೇರಿದಂತೆ ಮಳೆ ಆಶ್ರಿತ ಬೆಳೆಗಳೂ ಫೆಂಗಲ್ ಚಂಡಮಾರುತಕ್ಕೆ ನೆಲಕಚ್ಚಿದ್ದು, ಮಳೆ ನಿಂತರು ಬೆಳೆಯನ್ನು ಮತ್ತೆ ಸರಿ ಮಾಡುವುದು ಕಷ್ಟ ಎನ್ನುವ ಪರಿಸ್ಥಿತಿ ಎದುರಾಗಿದೆ. ಅದರಲ್ಲೂ ಟೊಮೆಟೊ ಸೇರಿ ಇತರ ತರಕಾರಿ ಬೆಳೆಗಳು ಅಧಿಕ ತೇವಾಂಶದಿಂದ ಬಹುತೇಕ ನಾಶಗೊಂಡಿವೆ. ಕೊಯ್ಲಿಗೆ ಬಂದಿದ್ದ ಭತ್ತ, ರಾಗಿ ಸಲು ಚಾಪೆಹಾಸಿದಂತೆ ಮಲಗಿವೆ. ಹಿಂಗಾರು ಉತ್ತಮ ಮಳೆಯಿಂದ ಭಾರಿ ಇಳುವರಿಯ ನಿರೀೆಯಲ್ಲಿದ್ದ ರೈತರಿಗೆ ಗಲ್ ಚಂಡಮಾರುತ ಭಾರಿ ಹೊಡೆತ ನೀಡಿದ್ದು, ರಾಗಿ, ಭತ್ತ ನಾಟಿ ಮಾಡಿದ ಕೂಲಿಯೂ ಕೈಸೇರಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
"ಮಳೆಯಿಂದ ಬೆಳೆ ನಷ್ಟದ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮಳೆ ನಿಂತ ತಣ ರೈತರ ತೋಟಗಳಿಗೆ ಭೇಟಿನೀಡಿ ಪರಿಶೀಲನೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು."
- ಎನ್. ರಮೇಶ್, ಹಿರಿಯ ಸಹಾಯಕ ನಿರ್ದೇಶಕ, ಮುಳಬಾಗಿಲು
"ಈ ಬಾರಿ ರಾಗಿ, ಭತ್ತ ಬಿತ್ತನೆ ಪ್ರಮಾಣ ಮುಂಗಾರಿನಲ್ಲಿ ಮಳೆ ಇಲ್ಲದ ಕಾರಣ ಕಡಿಮೆಯಾಗಿದೆ. ಮಳೆಯಿಂದ ನಷ್ಟವಾಗಿರುವ ಹೊಲಗದ್ದೆಗಳಿಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಸಂಗ್ರಹಣೆ ಮಾಡಲು ಸೂಚನೆ ನೀಡಲಾಗಿದೆ."
- ಎಸ್.ರವಿಕುಮಾರ್, ಹಿರಿಯ ಸಹಾಯಕ, ಕೃಷಿ ನಿರ್ದೇಶಕ, ಮುಳಬಾಗಿಲು
"1 ಎಕರೆ ಭತ್ತದ ಗದ್ದೆ ಬಿರುಗಾಳಿ ಮಳೆಗೆ ನೆಲಕ್ಕೆ ಬಿದ್ದಿದ್ದು, 1 ಲ ನಷ್ಟ ಉಂಟಾಗಿದೆ. ಇದನ್ನು ಮಳೆ ನಿಂತಾಗ ಕೊಯ್ಲು ಮಾಡಲು ಮೂರು ಪಟ್ಟು ಕೂಲಿ ಹೆಚ್ಚಾಗುತ್ತದೆ. ಇರುವ ಫಸಲಿನ ಗುಣಮಟ್ಟವೂ ಕಡಿಮೆಯಾಗುತ್ತದೆ."
- ಸಿ.ಮೋಹನ್, ತಿಪ್ಪದೊಡ್ಡಿ
'2 ಎಕರೆ ರಾಗಿ ಬೆಳೆ ಬಿರುಗಾಳಿ ಮಳೆಗೆ ಮಕಾಡೆ ಮಲಗಿದ್ದು, ಮಳೆ ನಿಂತರೂ ಕೊಯ್ಲು ಮಾಡುವುದು ಕಷ್ಟ. ಮಳೆ ಮುಂದುವರೆದರೆ ನಮ್ಮ ಪರಿಸ್ಥಿತಿ ಹೇಳತೀರದು. ಸರ್ಕಾರ ಬೆಳೆಹಾನಿ ಸೂಕ್ತ ಪರಿಹಾರ ನೀಡಲಿ"
- ಕೆ.ಎನ್.ರುನಾಥ್, ತಿಪ್ಪದೊಡ್ಡಿ ರೈತ