ಜನಾಭಿಪ್ರಾಯ ವಿರುದ್ಧ ಹೋಗಿ ಕೈ ಸುಟ್ಟುಕೊಂಡರು

11Huk1
Published on

ಹುಕ್ಕೇರಿ: ವಿದ್ಯುತ್ ಸಹಕಾರ ಸಂಘದ ಚುನಾವಣೆಯಲ್ಲಿ ನಿಷ್ಠಾವಂತರನ್ನು ಗುರುತಿಸಿದ್ದರಿಂದ ನಮ್ಮವರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪಟ್ಟ ದಕ್ಕಿದೆ ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ತಾಲೂಕಿನ ಬೆಲ್ಲದ ಬಾಗೇವಾಡಿಯ ಗೃಹಕಚೇರಿಯಲ್ಲಿ ಶುಕ್ರವಾರ ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಅವರ ಕುಟುಂಬದವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಚುನಾವಣೆಯಲ್ಲಿ ತಾಲೂಕಿನ ಸಂಘದ ಸದಸ್ಯರು ಸ್ವಾಭಿಮಾನ ಪ್ರದರ್ಶಿಸಿ ನಮ್ಮ ಬೆಂಬಲಿತರ ಕೈಹಿಡಿದ್ದಾರೆ. ವಿರೋಧಿಗಳು ಆಸೆ-ಆಮಿಷಗಳ ಮೂಲಕ ನಮ್ಮ ಬೆಂಬಲಿತರಲ್ಲಿ ಕೆಲವರನ್ನು ಸೆಳೆದು ಅಧಿಕಾರ ಚುಕ್ಕಾಣಿ ಹಿಡಿದಿದ್ದಕ್ಕೆ ಪ್ರತಿಯಾಗಿ ಜನತೆ ಇತಿಶ್ರೀ ಹಾಡಿದರು. ಅಧಿಕಾರ ಶಾಶ್ವತವಲ್ಲ ಎಂದರಿತು ಸೇವೆ ಮಾಡಿದ್ದರಿಂದ ಈ ಲ ಸಿಕ್ಕಿದೆ ಎಂದರು.

ನಮ್ಮನ್ನು ತೊರೆದವರು ನಮ್ಮ ಕುರಿತು ಇಲ್ಲಸಲ್ಲದ ಆರೋಪ ಮಾಡಿದರು. ನಮ್ಮನ್ನು ಮನೆ ಮಕ್ಕಳಂತೆ ಕ್ಷೇತ್ರದ ಜನ ಬೆಳೆಸಿದ್ದಾರೆ. ಇದನ್ನರಿಯದೆ ವಿರೋಧಿಗಳು ಜನಾಭಿಪ್ರಾಯ ವಿರುದ್ಧ ರಾಜಕಾರಣ ಮಾಡಲು ಹೋಗಿ ಕೈ ಸುಟ್ಟುಕೊಂಡರು ಎಂದರು.

ವಿದ್ಯುತ್ ಸಹಕಾರ ಸಂಘದ ಅಧ್ಯಕ್ಷ ಮಹಾವೀರ ನಿಲಜಗಿ ಮಾತನಾಡಿ, ನಮ್ಮ ತಂದೆ ಯಾವಾಗಲೂ ಕತ್ತಿ ಕುಟುಂಬದ ನಿಷ್ಠಾವಂತ ಆಪ್ತರು. ಅವರ ನಿಧನಾನಂತರವೂ ನಾವು ಅವರೊಂದಿಗಿದ್ದೇವೆ. ನಮ್ಮ ನಿಷ್ಠೆ ಗುರುತಿಸಿ ನನಗೆ ಅವಕಾಶ ಕಲ್ಪಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಧಕ್ಕೆಯಾಗದಂತೆ ಸಂಘದ ಆಡಳಿತ ಮಾಡುವುದಾಗಿ ತಿಳಿಸಿದರು. ಸಂಘದ ನಿರ್ದೇಶಕ ಕಲಗೌಡ ಪಾಟೀಲ, ಸಂಜಯ ನಿಲಜಗಿ, ಪ್ರಜ್ವಲ ನಿಲಜಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net