ಪಿಂಚಣಿದಾರರ ದಿನಾಚರಣೆ

WEB LOGO
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಅಖಿಲ ಭಾರತ ಕೇಂದ್ರ ಸರ್ಕಾರಿ ನಿವೃತ್ತ ಕರ್ಮಚಾರಿಗಳ ಸಂಘದ ಧಾರವಾಡ ಶಾಖೆ ವತಿಯಿಂದ ಡಿ. 17ರಂದು ಬೆಳಗ್ಗೆ 10 ಗಂಟೆಗೆ ಗಾಂಧಿನಗರದ ಶ್ರೀ ಸಾಯಿ ಮಂದಿರದಲ್ಲಿ ಕೇಂದ್ರ ಸರ್ಕಾರದ ಪಿಂಚಣಿದಾರರ ದಿನಾಚರಣೆ ಸಮಾರಂಭ ಏರ್ಪಡಿಸಲಾಗಿದೆ.

ವಿಶ್ರಾಂತ ಹಿರಿಯ ಅಂಚೆ ಅಧೀಕ್ಷಕ ವಿ.ಆರ್​. ಜೋಶಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಯಾಗಿ ಆಕಾಶವಾಣಿ ವಿಶ್ರಾಂತ ನಿರ್ದೇಶಕ ಸತೀಶ ಪರ್ವತಿಕರ ಆಗಮಿಸುವರು. ಸಂಘದ ಅಧ್ಯಕ್ಷ ಎಂ.ಎಸ್​.ಹಾಗರಗಿ ಅಧ್ಯಕ್ಷತೆ ವಹಿಸುವರು.

ಸಂದ ಹಿರಿಯ ಸದಸ್ಯರಾದ ಸಾವಿತ್ರಿಬಾಯಿ ಯಾದವ ಹಾಗೂ ಪಿ.ಆರ್​. ಪರ್ವತಿಕರ ಅವರಿಗೆ ಸನ್ಮಾನಿಸಲಾಗುವುದು. ನಂತರ ಆಕಾಶವಾಣಿ ಕೇಂದ್ರದ ನಿವೃತ್ತ ಕಲಾವಿದ ಶೇಖ ಅಬ್ದುಲ್​ ಖಾಜಿ ಅವರು ಕೊಳಲು ವಾದನ ಪ್ರಸ್ತುತಪಡಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net