

ರಾಯಬಾಗ: ನಿವತ್ತ ನೌಕರರಿಗೆ 8ನೇ ವೇತನ ಆಯೋಗದಿಂದ ಅನ್ಯಾಯ ಆಗುವುದನ್ನು ತಡೆಯುವಂತೆ ಆಗ್ರಹಿಸಿ ತಾಲೂಕು ನಿವತ್ತ ನೌಕರರ ಸಂದಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಿವತ್ತ ನೌಕರರು ಸಹಿ ಸಂಗ್ರಹ ಚಳುವಳಿ ಮಾಡಿ ಪ್ರತಿಭಟಿಸುವ ಮೂಲಕ ಗ್ರೇಡ್&2 ತಹಸೀಲ್ದಾರ್ ಪರಮಾನಂದ ಮಂಗಸೂಳಿ ಮುಖಾಂತರ ಪ್ರಧಾನಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿಸಿದರು.
ತಾಲೂಕು ನಿವತ್ತ ನೌಕರರ ಸಂದ ಅಧ್ಯ ಸಣ್ಣಪ್ಪ ಮೀಸಿ ಮಾತನಾಡಿ, ಕೇಂದ್ರ ಸರ್ಕಾರ ಮಾ. 25ರಂದು ಲೋಕಸಭೆಯಲ್ಲಿ ಹಣಕಾಸು ಮಸೂದೆ ಮಂಡಿಸುವಾಗ ಸಚಿವೆ ನಿರ್ಮಲಾ ಸಿತಾರಾಮನ್, 2025ರ ಏಪ್ರಿಲ್ 1ರ ಮೊದಲು 8 ನೇ ವೇತನ ಆಯೋಗದಿಂದ ನಿವೃತ್ತರಾದ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕೌಟುಂಬಿಕ ಪಿಂಚಣಿ ಪರಿಷ್ಕರಿಸದಿರುವ ಮತ್ತು ತುಟ್ಟಿಭತ್ಯೆ ನಿಲ್ಲಿಸುವ ರ್ನಿಣಯ ತೆಗೆದುಕೊಂಡಿದ್ದಾರೆ. ಈ ರ್ನಿಣಯದಿಂದ ನಮಗೆ ಆರ್ಥಿಕ ಅನ್ಯಾಯವಾಗುತ್ತದೆ. ಇದನ್ನು ನಮ್ಮ ಸಂ ತೀವ್ರವಾಗಿ ಖಂಡಿಸುತ್ತದೆ. ಪಿಂಚಣಿದಾರರಿಗೆ 8ನೇ ವೇತನ ಆಯೋಗದಿಂದ ಅನ್ಯಾಯವಾಗದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ತಡೆದು ನಮಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು. ಸಂದ ತಾಲೂಕಾಧ್ಯ ಸಣ್ಣಪ್ಪ ಮೀಸಿ, ಎಚ್.ಎ. ಭಜಂತ್ರಿ, ಎಸ್.ಡಿ. ಚಲುವಾದಿ, ವಿ.ಎ.ಗುಣಕೆ, ಎಂ.ಎಲ್. ಕಟ್ಟೆನ್ನವರ, ಅಶೋಕ ದೇಶಿಂಗೆ, ಬಿ.ಎಂ.ಪಾಟೀಲ, ಎಸ್.ಪಿ. ಭಜಂತ್ರಿ, ಬಿ.ಬಿ. ಅಸೋದೆ, ಎಂ.ಆರ್. ಮಠದ, ಎಸ್.ಎಸ್. ಕಾಂಬಳೆ, ಕುಮಾರ ಅವಳೆ, ಹನುಮಂತ ಗುರವ, ಎಸ್.ಐ. ಅಲಾಸ, ಜೆಪಾಲ ಬಸನಾಯಕ, ರಾಜಕುಮಾರ ದುಮಾಳೆ, ಎಸ್.ಡಿ. ಗೆನ್ನನವರ, ವಿಷ್ಣು ಮಾಳಿ ಇತರರಿದ್ದರು.