ಹೆಚ್ಚುವರಿ ಪಿಂಚಣಿ ಮೊತ್ತ ನೀಡಿ, ನಿವೃತ್ತ ಶಿಕ್ಷಕರ ಸಂಘದ ಒತ್ತಾಯ

Published on

ಹುಬ್ಬಳ್ಳಿ: ಪಿಂಚಣಿದಾರರಿಗೆ ವಯಸ್ಸಿಗೆ ಅನುಗುಣವಾಗಿ ಹೆಚ್ಚುವರಿ ಮೊತ್ತ ನೀಡಬೇಕೆಂದು ನ್ಯಾಯಾಲಯ ಆದೇಶಿಸಿದರೂ ರಾಜ್ಯ ಸರ್ಕಾರ ಪಾಲನೆ ಮಾಡುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ಹಿರಿಯರಿಗೆ ಗೌರವ ನೀಡಬೇಕೆಂದು ಉತ್ತರ ಕರ್ನಾಟಕ ನಿವೃತ್ತ ವಿಶ್ವವಿದ್ಯಾಲಯ ಮತ್ತು ಕಾಲೇಜು ಶಿಕ್ಷಕರ ಸಂಘದ ಗೌರವ ಕಾರ್ಯದರ್ಶಿ ಪ್ರೊ. ಜಿ.ಎಸ್. ಕಲಬುರ್ಗಿ ಆಗ್ರಹಿಸಿದ್ದಾರೆ.

ಕರ್ನಾಟಕ ಸರ್ಕಾರವು 2010ರ ಸುತ್ತೋಲೆಯಂತೆ ಪಿಂಚಣಿದಾರರಿಗೆ 2006ರಿಂದ ಅನ್ವಯವಾಗುವಂತೆ 80 ವರ್ಷ ದಾಟಿದವರಿಗೆ ಅಂದಿನ ಮೂಲ ಪಿಂಚಣಿ ಮೊತ್ತದ ಶೇ. 20, 85ರಿಂದ 90 ವರ್ಷದವರಾಗುವವರೆಗೆ ಶೇ. 30 ಹಾಗೂ 90 ವರ್ಷ ಮೇಲ್ಪಟ್ಟವರಿಗೆ ಶೇ. 50ರಷ್ಟು ಹೆಚ್ಚುವರಿ ಪಿಂಚಣಿ ಮಂಜೂರು ಮಾಡಿತ್ತು. ಆದರೆ, 1993ರ ನಂತರ ನಿವೃತ್ತರಾದವರಿಗೆ ಅನ್ವಯಿಸುವುದಿಲ್ಲ ಎಂದು ನಿಯಮ 2ರಲ್ಲಿ ಸ್ಪಷ್ಟಪಡಿಸಿತ್ತು.

2019ರಲ್ಲಿ ಇನ್ನೊಂದು ಸುತ್ತೋಲೆ ಹೊರಡಿಸಿ 6ನೇ ವೇತನ ಆಯೋಗದ ಸೂಚನೆಯಂತೆ ಹಿಂದಿನ 2010ರ ಸುತ್ತೋಲೆಯನ್ನು ರದ್ದುಪಡಿಸಿತ್ತು.

ಇದರ ಪರಿಣಾಮವಾಗಿ 1/7/1993ರಂದು ಅಥವಾ ನಂತರ ನಿವೃತ್ತರಾದ 80 ವರ್ಷ ಮುಟ್ಟಿದ ಸಾವಿರಾರು ಪಿಂಚಣಿದಾರರಿಗೆ ಹೆಚ್ಚಿನ ಮೊತ್ತವನ್ನು ನಿರಾಕರಿಸಿದಂತಾಗಿದೆ. ಈ ಬಗ್ಗೆ ಕರ್ನಾಟಕ ಹೈಕೋರ್ಟ್ನಲ್ಲಿ ದಾವೆ ಹೂಡಲಾಗಿದೆ ವಿಚಾರಣೆ ನಡೆದು 2010ರ ಸುತ್ತೋಲೆಯಲ್ಲಿದ್ದ ನಿಯಮವನ್ನು ಕಿತ್ತೆಸೆಯಲಾಗಿದೆ.

ಹೆಚ್ಚುವರಿ ಪಿಂಚಣಿ ಲಾಭ ನೀಡುವಾಗ ನಿವೃತ್ತಿ ದಿನಾಂಕವನ್ನು ಗಮನಕ್ಕೆ ತರದೇ ಎಲ್ಲ ಪಿಂಚಣಿದಾರಿಗೆ ಅನ್ವಯಿಸಬೇಕು ಎಂದು ಆದೇಶ ಮಾಡಿದೆ. ಈ ಆದೇಶವನ್ನು ರಾಜ್ಯ ಸರ್ಕಾರ 15 ತಿಂಗಳು ಕಳೆದರೂ ಜಾರಿ ಮಾಡಿಲ್ಲ.

ಕರ್ನಾಟಕ ರಾಜ್ಯದ ಎಲ್ಲ ಸರ್ಕಾರಿ ಪಿಂಚಣಿದಾರರ ಸಂಗಳು ಮತ್ತು ರಾಜ್ಯ ನೌಕರರ ಸಂವು ಸರ್ಕಾರಕ್ಕೆ ಮನವಿ ಸಲ್ಲಿಸಿ ಕೂಡಲೇ ಮತ್ತೊಂದು ಸುತ್ತೋಲೆ ಹೊರಡಿಸಿ 80 ವರ್ಷ ಪೂರೈಸಿದ ಎಲ್ಲ ಪಿಂಚಣಿದಾರರಿಗೆ ಹೆಚ್ಚಿನ ಮೊತ್ತವನ್ನು ನೀಡಲು ಒತ್ತಾಯ ಮಾಡಿದೆ.

ಸರ್ಕಾರ ಹಾಗೂ ಅಧಿಕಾರಿಗಳು ಹೈಕೋರ್ಟ್ ಆದೇಶ ಪಾಲನೆ ಮಾಡಬೇಕು. ಇಲ್ಲದಿದ್ದರೆ ನ್ಯಾಯಾಂಗ ನಿಂದನೆ ಅಜಿರ್ ಸಲ್ಲಿಸಬೇಕಾಗುತ್ತದೆ ಎಂದು ಸಂಘ ಎಚ್ಚರಿಕೆ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net