ಪಿಂಚಣಿಗಾಗಿ ಸರ್ಕಾರಕ್ಕೆ ವಂಚನೆ ಸರಿಯಲ್ಲ

mkg1a
Published on

ಮಲೇಬೆನ್ನೂರು: ಪಿಂಚಣಿ ಪಡೆಯಲು ಕೆಲವರು ಆಧಾರ್ ಕಾರ್ಡ್ ತಿದ್ದುಪಡಿ ಮಾಡಿ ಸರ್ಕಾರಕ್ಕೆ ವಂಚನೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದು ಉಪ ತಹಸೀಲ್ದಾರ್ ಆರ್. ರವಿ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಪಿಂಚಣಿ ದಿನಾಚರಣೆಯಲ್ಲಿ ಮಾತನಾಡಿ, ಅಂತಹ ಫಲಾನುಭವಿಗಳ ಬಗ್ಗೆ ಸ್ಥಳ ಮಹಜರು ನಡೆಸಿದಾಗ ನಿಜ ತಿಳಿಯುತ್ತದೆ. ಆ ರೀತಿ ಮಾಡದೆ ನೈಜ ಫಲಾನುಭವಿಗಳು ನೇರವಾಗಿ ಕಚೇರಿಗೆ ಬಂದು ವಿಚಾರಿಸಿ ಎಂದರು.

ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಲ್ಲಿ ಮನೆಯ ದುಡಿಯುವ ವ್ಯಕ್ತಿ ಮರಣ ಹೊಂದಿದರೆ, ಮೂರು ತಿಂಗಳೊಳಗೆ ಅರ್ಜಿ ಹಾಕಿದಲ್ಲಿ ಸರ್ಕಾರ 20000 ರೂ. ನೀಡಲಿದೆ ಎಂದರು.

ಮುಖ್ಯಾಧಿಕಾರಿ ಸುರೇಶ್ ಮಾತನಾಡಿ, ಸರ್ಕಾರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನೂರಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದರು.

ಷಾ ಅಬ್ರಾರ್, ದಾದಾಪೀರ್, ರೇವಣ ಸಿದ್ದೇಶ್, ಮಂಜಣ್ಣ, ಗಂಗಾಧರ್, ಯೂಸೂಫ್ ಮಾತನಾಡಿದರು.

ಸಭೆಯಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಯ 25 ಫಲಾನುಭವಿಗಳಿಗೆ ಪಿಂಚಣಿ ಮಂಜೂರಾತಿ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net