ಅರ್ಹರಿಗೆ ಸೌಲಭ್ಯ ದೊರಕಿಸಿಕೊಡಿ

ಪಿಂಚಣಿ ಅದಾಲತ್‌
ಪಿಂಚಣಿ ಅದಾಲತ್‌
Published on

ವಿಜಯವಾಣಿ ಸುದ್ದಿಜಾಲ ದಾಬಸ್‌ಪೇಟೆ
ಕಂದಾಯ ಇಲಾಖೆಯ ಎಲ್ಲ ಸೌಲಭ್ಯಗಳು ಅರ್ಹ ಲಾನುಭವಿಗೆ ದೊರಕಿಸಿಕೊಡಲು ಅಧಿಕಾರಿಗಳು ಪ್ರಮಾಣಿಕವಾಗಿ ಕೆಲಸ ಮಾಡಬೇಕು ಎಂದು ಸೋಂಪುರ ಗ್ರಾಪಂ ಅಧ್ಯಕ್ಷೆ ಪ್ರೇಮಾ ತೀರ್ಥಪ್ರಸಾದ್ ಹೇಳಿದರು.
ಸೋಂಪುರ ನಾಡ ಕಚೇರಿ ಆವರಣದಲ್ಲಿ ಕಂದಾಯ ಇಲಾಖೆಯಿಂದ ಶನಿವಾರ ಹಮ್ಮಿಕೊಂಡಿದ್ದ ಪಿಂಚಣಿ ಅದಾಲತ್‌ನಲ್ಲಿ ಮಾತನಾಡಿದರು.
ಪಟ್ಟಣದಲ್ಲಿ ಕೆಲವು ಸೈಬರ್ ಸೆಂಟರ್‌ಗಳಲ್ಲಿ ಆಧಾರ್ ತಿದ್ದುಪಡಿ ನಡೆಯುತ್ತದೆ. ಆದ್ದರಿಂದ ರಾಜಸ್ವ ನಿರೀಕ್ಷಕರು ಪರೀಕ್ಷಿಸಬೇಕು. ವಿಧವಾ ವೇತನ, ಸಂಧ್ಯಾ ಸುರಕ್ಷಾ ವೇತನ ಹಾಗೂ ಅಂಗವಿಕಲರ ಮಸಾಶನ ಮಂಜೂರಾತಿಯನ್ನು ಶೀಘ್ರ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಗ್ರಾಪಂ ಉಪಾಧ್ಯಕ್ಷೆ ಪಿ.ಲಾವಣ್ಯಾ ಜಗದೀಶ್ ಮಾತನಾಡಿ, ಕಂದಾಯ ಇಲಾಖೆಯ ಬಹುತೇಕ ಸೇವೆಗಳು ಮನೆಯ ಬಾಗಿಲಲ್ಲೇ ಲಭ್ಯವಿದ್ದು, ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ನೆಲಮಂಗಲ ಉಪ ತಹಸೀಲ್ದ್ದಾರ್ ಬಿ.ಸಿ.ಶಶಿಧರ ಮಾತನಾಡಿ, ಅದಾಲತ್‌ನಲ್ಲಿ 2 ಮಂದಿಗೆ ಸಂಧ್ಯಾ ಸುರಕ್ಷಾ ಯೋಜನೆ, 12 ಮಂದಿಗೆ ವೃದ್ಧಾಪ್ಯ ವೇತನ, 5 ಮಂದಿ ಅಂಗವಿಕಲರಿಗೆ ವೇತನ, ನಾಲ್ವರಿಗೆ ನಿರ್ಗತಿಕ ವೇತನ, ಆಸಿಡ್ ದಾಳಿಗೆ ತುತ್ತಾದ ಮಹಿಳೆಗೆ ನೆರವು ಮಂಜೂರಾತಿ ಪತ್ರ ವಿತರಿಸಲಾಗಿದೆ ಎಂದರು.
ಗ್ರಾಮ ಲೆಕ್ಕಿಗರಾದ ಕಿರಣ್ ಪ್ರಕಾಶ್, ಬಾಲಕೃಷ್ಣ ಲೋಕೇಶ, ಶ್ವೇತಾ, ಪುಷ್ಪಾ, ಮಮತಾ, ಮಾಧವ ರಾವ್, ಗೋಪಾಲ್, ಕೇಸ್ ವರ್ಕರ್ ವರ್ಷಿತಾ ಸಿಬ್ಬಂದಿಯಾದ ಹನುಮಂತರಾಜು, ಗಂಗಾಧರ, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net