ಗ್ರಾಮ ಆಡಳಿತಾಧಿಗಳಿಂದ ಪೆನ್​ಡೌನ್​ ಮುಷ್ಕರ

Pendown strike by village administrators
ಸಿಂದಗಿ ಪಟ್ಟಣದ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಗ್ರಾಮಾಡಳಿತಾಧಿಕಾರಿಗಳು ಕರ್ತವ್ಯ ಸ್ಥಗಿತಗೊಳಿಸಿ ಅರ್ನಿದಿಷ್ಟಾವಧಿ ಪೆನ್​ಡೌನ್​ ಮುಷ್ಕರ ನಡೆಸಿದರು. ಅಬ್ಬಾಸಲಿ ಅಂಗಡಿ, ವಿನೋದ ಕರನಾಳ, ಬಸಯ್ಯ ಮಠ ಮತ್ತಿತರರಿದ್ದರು.
Published on

ಸಿಂದಗಿ: ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಗುರುವಾರ ಕರ್ನಾಟಕ ರಾಜ್ಯ ಗ್ರಾಮ ಆಡಳಿತಾಧಿಕಾರಿಗಳ ಕೇಂದ್ರ ಸಂ (ರಿ)ದ ತಾಲೂಕು ಟಕದ ನೇತತ್ವದಲ್ಲಿ ಅಗತ್ಯ ಮೂಲಭೂತ ಮತ್ತು ಸೇವಾ ಸೌಲಭ್ಯಗಳನ್ನು ಒದಗಿಸುವುದು ಹಾಗೂ ಸರಕಾರ ಮತ್ತು ಮೇಲಧಿಕಾರಿಗಳು, ತಮ್ಮ ಮೇಲೆ ಆ್ಯಪ್​ ಮೂಲಕ ರ್ಯಾಂಕ್​ ಕೆಲಸಕ್ಕೆ ಒತ್ತಡ ಹಾಕುತ್ತಿರುವುದನ್ನು ಖಂಡಿಸಿ ಪೆನ್​&ಡೌನ್​ ಮೂಲಕ ಅನಿದಿಷ್ಟಾವಧಿ ಮುಷ್ಕರ ಆರಂಭಿಸಿದರು.

ಈ ವೇಳೆ ತಾಲೂಕು ಟಕದ ಆಧ್ಯ ಅಬ್ಬಾಸಲಿ ಅಂಗಡಿ, ವಿನೋದ ಕರನಾಳ, ಬಸಯ್ಯ ಮಠ, ಇತರ ಗ್ರಾಮ ಆಡಳಿತಾಧಿಕಾರಿಗಳು ಮಾತನಾಡಿ, ಸರ್ಕಾರಕ್ಕೆ ನಮ್ಮ ಸೇವೆಯ ಕುರಿತು ಕಾಳಜಿಯಿಲ್ಲ. ಇಲಾಖೆ ಸಚಿವರುಗಳಿಗೆ ಗ್ರಾಮ ಮಟ್ಟದಲ್ಲಿ ಸೇವೆ ಸಲ್ಲಿಸಲು ನಮಗೆ ಅಗತ್ಯವಿರುವ ಕಚೇರಿ(ಕೋಣೆ), ರೆತರ ದಾಖಲಾತಿಗಳ ಸಂರಣೆಗೂ ಯಾವ ವ್ಯವಸ್ಥೆಯೂ ಇಲ್ಲ ಎಂಬುದನ್ನು ಮನವರಿಕೆ ಮಾಡಿಕೊಂಡರೂ ನಮಗೆ ಸ್ಪಂದಿಸುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಕಂದಾಯ ಇಲಾಖೆಯ 20ಕ್ಕೂ ಹೆಚ್ಚು ವೆಬ್​ ಹಾಗೂ ಮೊಬೆಲ್​ ತಂತ್ರಾಂಶಗಳ ಬಳಕೆ ಮೂಲಕ ಣ, ಣಕ್ಕೂ ಸ್ಪರ್ಧೆಯಂತೆ ಮಾಹಿತಿ ದಾಖಲಿಸುವುದು, ಸಾರ್ವಜನಿಕರಿಂದ ಮಾಹಿತಿ ಪಡೆಯುವುದು, ಜಾಗತಿ ಮೂಡಿಸುವುದು ಎಲ್ಲವೂ ನಮ್ಮ ಕೆಲಸಗಳೇ ಆಗಿದ್ದು ಎಲ್ಲವೂ ಎಲ್ಲ ಸಮಯವೂ ಒತ್ತಡವೇ ಆಗುತ್ತಿದ್ದರೂ, ಮೇಲಾಧಿಕಾರಿಗಳು ಸಮಯಕ್ಕೆ ಸಿಗದ ಮಾಹಿತಿ, ದಾಖಲೀಕರಣಕ್ಕಾಗಿ ನಮ್ಮ ಮೇಲೆ ಮೆಮೋ, ಸಸ್ಪೆಂಡ್​ನಂತಹ ಕ್ರಮಗಳ ಮೂಲಕ ನಮ್ಮನ್ನು ಶಿಸಲಾಗುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಮುಷ್ಕರದಲ್ಲಿ ನಿಖಿಲ ಖಾನಾಪೂರ, ಸರಸ್ವತಿ ಮೋರೆ, ಮೇಘಾ ಕುಳಗೇರಿಮಠ, ವಿಜಯಲಕ್ಷಿ$್ಮ ಶಹಾಪೂರ, ನಾಗಮ್ಮ ಸಾಲಿ, ರಮೇಶ ತಳವಾರ, ಸುನೀಲ ಚೌರ, ಸಂತೋಷ ಬಿದರಕುಂದಿ, ಆಸ್​ೀ ಖಾನಾಪೂರ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳು ಹಾಗೂ ಗ್ರಾಮ ಸಹಾಯಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net