

ಯಾದಗಿರಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಅತಿಥಿ ಉಪನ್ಯಾಸಕರು ಹಾಗು ಶಿಕ್ಷಕರ ಹೋರಾಟ ಸಮಿತಿಯಿಂದ ಶುಕ್ರವಾರ ಆನ್ಲೈನ್ ಭಿತ್ತಿಪತ್ರ ಚಳವಳಿ ನಡೆಯಿತು.
ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದ ಉಪನ್ಯಾಸಕರು, ಬಾಕಿ ಉಳಿದ ವೇತನವನ್ನು ಒಂದೇ ಬಾರಿಗೆ ಪಾವತಿಸಬೇಕು. ಕರೊನಾ ಹಿನ್ನೆಲೆಯಲ್ಲಿ ಅತಿಥಿ ಉಪನ್ಯಾಸಕರು ಮತ್ತು ಶಿಕ್ಷಕರಿಗೆ ಪರಿಹಾರ ಪ್ಯಾಕೇಜ್ ಘೋಷಿಸುವುದರ ಜತೆಗೆ ಉಪನ್ಯಾಸಕರು, ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಈಗಾಗಲೇ 8 ಅತಿಥಿ ಉಪನ್ಯಾಸಕರು ಮಾನಸಿಕವಾಗಿ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಮಧ್ಯೆ ಮತ್ತೊಬ್ಬ ಉಪನ್ಯಾಸಕಿ ಕ್ಯಾನ್ಸರ್ನಿಂದ ಮೃತಪಟ್ಟಿರುವ ವರದಿಯಾಗಿದೆ. ಹಲವರು ಗಂಭೀರ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಎಷ್ಟೋ ಶಿಕ್ಷಕರು ಮತ್ತು ಉಪನ್ಯಾಸಕರು ಹೇಳಿಕೊಳ್ಳಲಾಗದ ನೋವನ್ನು ಒಳಗೊಳಗೇ ಅನುಭವಿಸುತ್ತಿದ್ದು, ಆಥರ್ಿಕ ಮುಗ್ಗಟ್ಟಿನಿಂದ ಕುಗ್ಗಿ ಹೋಗಿದ್ದಾರೆ ಎಂದು ಅಳಲು ತೋಡಿಕೊಂಡರು.
ನೆಟ್, ಸೆಟ್, ಪಿಎಚ್ಡಿ ಇತರ ಎಲ್ಲ ಅರ್ಹತೆ ಪಡೆದಿದ್ದರೂ ಬೀದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ. ಉನ್ನತ ವ್ಯಾಸಂಗ ಮಾಡಿಯೂ ಉದ್ಯೋಗ ಖಾತ್ರಿಯಡಿ ಲಸ, ತರಕಾರಿ ಮಾರಾಟ ಮಾಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಬಹಳ ನೋವುಂಟು ಮಾಡುತ್ತವೆ. ರಾಜ್ಯ ಸರ್ಕಾರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.‘
ಪ್ರಮುಖರಾದ ಸಿದ್ದು ಪಾಟೀಲ್, ಗೌರೀಶ್ವರಯ್ಯ, ರಾಜಶೇಖರ, ಅಂಬರೀಶ್ ನಾಯಕ, ವೆಂಕಟೇಶ, ಜಮಾಲಸಾಬ್ ಇತರರಿದ್ದರು.