

ಚಿತ್ರದುರ್ಗ: ಆನೆಬಾಗಿಲು ಬಳಿಯಿರುವ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ 66ನೇ ವರ್ಷದ ಪ್ರಸನ್ನ ಗಣಪತಿ ಪ್ರತಿಷ್ಠಾಪನೆ ಅಂಗವಾಗಿ ಭಾನುವಾರ ಪೆಂಡಾಲ್ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿತು.
ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಜೆ.ಗೋಪಾಲ್‌ರಾವ್ ಜಾದವ್, ಉಪಾಧ್ಯಕ್ಷ ನಾಗರಾಜ್ ಬೇದ್ರೆ, ಕಾರ್ಯದರ್ಶಿ ಶ್ಯಾಂಪ್ರಸಾದ್, ನಾರಾಯಣರಾವ್, ಶಂಭು, ಯಶವಂತರಾವ್, ರಮೇಶ್, ಸಿದ್ದು, ಕಾರ್ತಿಕ್, ನಗರಸಭೆ ಸದಸ್ಯ ಚಂದ್ರಶೇಖರ್, ಜಿ.ಎಂ.ರಾಜು, ಕೃಷ್ಣಪ್ಪ ಇದ್ದರು.