ವಿಮೆ ತಿರಸ್ಕರಿಸಿದ ವಿಮಾ ಕಂಪನಿಗೆ ದಂಡ

web 66
Published on

ಧಾರವಾಡ: ವಿಮೆ ತಿರಸ್ಕರಿಸಿದ ಚೋಳಮಂಡಲಮ್ ವಿಮಾ ಕಂಪನಿಗೆ ದಂಡ ಹಾಗೂ ದೂರುದಾರರಿಗೆ ಪರಿಹಾರ ಘೋಷಿಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಹುಬ್ಬಳ್ಳಿ ತಾಲೂಕಿನ ಹೆಬಸೂರ ಗ್ರಾಮದ ಅಶೋಕ ಎಂಬುವರು ಚೋಳಮಂಡಲಮ್ ಜನರಲ್ ಇನ್ಶುರೆನ್ಸ್ ಕಂಪನಿಗೆ 413 ರೂ. ಪ್ರೀಮಿಯಂ ಪಾವತಿಸಿ 2020ರ ಆ. 5ರಂದು ೫ ಲಕ್ಷ ರೂ.ಗಳ 1 ವರ್ಷದ ಅವಽಯ ಅಪಘಾತ ವಿಮೆ ಖರೀದಿಸಿದ್ದರು. ವಿಮಾದಾರ 2020ರ ಡಿ. 13ರಂದು ಅಪಘಾತದಲ್ಲಿ ಮೃತಪಟ್ಟಿದ್ದರು. ಮೃತನ ಪತ್ನಿ ಲಕ್ಷ÷್ಮ್ಮವ್ವ ಇಂಗಳಿಹಳ್ಳಿ ಅಗತ್ಯ ದಾಖಲೆಗಳೊಂದಿಗೆ ವಿಮೆ ಹಣ ಕೊಡುವಂತೆ ವಿಮಾ ಕಂಪನಿಗೆ ಕ್ಲೇಮ್ ಅರ್ಜಿ ಸಲ್ಲಿಸಿದ್ದರು. ಆದರೆ, ಮೃತ ಅಶೋಕ ಅಪಘಾತ ಸಂದರ್ಭದಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ. ಅಲ್ಲದೆ, ದ್ವಿಚಕ್ರ ವಾಹನ ಚಾಲನಾ ಪತ್ರ ಹೊಂದಿರಲಿಲ್ಲ ಎಂಬ ಕಾರಣ ನೀಡಿ ವಿಮಾ ಕ್ಲೇಮ್ ತಿರಸ್ಕರಿಸಲಾಗಿತ್ತು. ಇದರಿಂದ ಸೇವಾ ನ್ಯೂನತೆ ಆಗಿದೆ ಎಂದು ಲಕ್ಷ÷್ಮವ್ವ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ವಿಮೆ ಚಾಲ್ತಿಯಲ್ಲಿದ್ದು, ಅಪಘಾತ ಇನ್ನೊಂದು ವಾಹನದ ಚಾಲಕನ ತಪ್ಪಿನಿಂದ ಆಗಿದೆ. ಆದ್ದರಿಂದ ವಿಮಾ ಕಂಪನಿ ನಿಯಮಾವಳಿಯಂತೆ ವಿಮಾ ಹಣವನ್ನು ಕೊಡಬೇಕು. ವಿಮಾ ಪಾಲಸಿಯ ನಿಯಮದಂತೆ ನಾಮಿನಿಗೆ 5 ಲಕ್ಷ ರೂ. ವಿಮಾ ಹಣ, ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ 50,000 ರೂ. ಪರಿಹಾರ ಮತ್ತು ಪ್ರಕರಣದ ವೆಚ್ಚ 10,000 ರೂ. ಪಾವತಿಸಬೇಕು ಎಂದು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net