

ಧಾರವಾಡ: ಸೇವಾ ನ್ಯೂನತೆ ಎಸಗಿದ ಇಲ್ಲಿನ ಗಣೇಶ ಗ್ಯಾಸ್ ಏಜೆನ್ಸಿಗೆ ದಂಡ ವಿಽಸಿ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಽಸಿ ಆದೇಶಿಸಿದೆ.
ಇಲ್ಲಿನ ಶಾಂತಿನಿಕೇತನನಗರ ನಿವಾಸಿ ಶಂಕರ ದೇವಲಾಪುರ ಎಂಬುವರು 2022ರ ಸೆ. 9ರಂದು ಗಣೇಶ ಗ್ಯಾಸ್ ಏಜೆನ್ಸಿಯಿಂದ ನೂತನ ಎಲ್‌ಪಿಜಿ ಗ್ಯಾಸ್ ಕನೆಕ್ಷನ್ ಪಡೆಯಲು ಸಂಪರ್ಕಿಸಿದ್ದರು. ಅದಕ್ಕೆ 7,297 ರೂ. ಶುಲ್ಕ ಹಾಗೂ ತಪಾಸಣಾ ಶುಲ್ಕ 236 ರೂ. ಪಡೆದಿದ್ದರು. ಅಲ್ಲದೆ 190 ರೂ. ಮೊತ್ತದ ಸುರಕ್ಷಾ ಗ್ಯಾಸ್ ಪೈಪ್ ಪಡೆದರೆ ಮÁತ್ರ ನೂತನ ಎಲ್‌ಪಿಜಿ ಗ್ಯಾಸ್ ಸಂಪರ್ಕ ಕೊಡುವುದಾಗಿ ಏಜೆನ್ಸಿಯವರು ಹೇಳಿದ್ದರು. ಇದಕ್ಕೆ ಶಂಕರ ಒಪ್ಪಿದಿದ್ದಾಗ ನೂತನ ಸಂಪರ್ಕ ಕಡಲಾಗುವುದಿಲ್ಲ ಎಂದು ಏಜೆನ್ಸಿಯವರು ಹೇಳಿದ್ದರು. ಅಲ್ಲದೆ, ಗ್ಯಾಸ್ ಲೀಕೇಜ್ ಆಗಿ ಕುಟುಂಬ ಅಥವಾ ಅಕ್ಕಪಕ್ಕದವರಿಗೆ ತೊಂದರೆಯಾದರೆ ಅದಕ್ಕೆ ದೂರುದಾರರೇ ಹೊಣೆ ಎಂದು ತಿಳಿವಳಿಕೆ ಪತ್ರ ಬರೆಸಿಕೊಂಡಿದ್ದರು.
ಗ್ಯಾಸ್ ಸಂಪರ್ಕ ಪಡೆಯುವವರಿಗೆ ಏಜೆನ್ಸಿಯವರು ಹೇಳಿದ ಸಲಕರಣೆಗಳನ್ನು ಕೊಳ್ಳಲು ಒತ್ತಾಯಿಸಿದ್ದು ಮತ್ತು ತಿಳಿವಳಿಕೆ ಪತ್ರ ಬರೆಸಿಕೊಂಡಿದ್ದು ಗ್ರಾಹಕರ ಸಂರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗಿದೆ ಎಂದು ಶಂಕರ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ನೀಡಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಹಾಗೂ ಪ್ರಭು ಹಿರೇಮಠ ಅವರು, ಏಜೆನ್ಸಿಯಿಂದ ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೂರುದಾರರಿಂದ ಬರೆಸಿಕೊಂಡ ತಿಳಿವಳಿಕೆ ಪತ್ರ ಹಿಂದಿರುಗಿಸುವುದು ಮತ್ತು ಅನಾನುಕೂಲತೆ ಹಾಗೂ ಮÁನಸಿಕ ಹಿಂಸೆಗಾಗಿ 5,000 ರೂ. ಪರಿಹಾರ, ಜೊತೆಗೆ ಪ್ರಕರಣದ ಖರ್ಚು ವೆಚ್ಚ 3,000 ರೂ. ಪಾವತಿಸಬೇಕು ಎಂದು ಆದೇಶಿಸಿದ್ದಾರೆ.