ಪ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್ಸ್ ಗೆ ದಂಡ

web 66
Published on

ಧಾರವಾಡ: ಮುಂಗಡ ಹಣ ನೀಡಿದ್ದ ಗ್ರಾಹಕನಿಗೆ ಕರಾರಿನಂತೆ ಪ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್ಸ್ ಗೆ ದಂಡ ವಿಽಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಬಾಗಲಕೋಟೆಯ ಗೀತಾ ಗೌಡರ ಎಂಬುವರು ನಗರದ ಎಂ.ಎಸ್. ಗ್ರೀನ್ ಕೌಂಟಿಯ ಮಾಲೀಕ ಶ್ರೀನಿವಾಸ ನಾಯ್ಡು ಎಂಬುವವ ಇಟ್ಟಿಗಟ್ಟಿಯಲ್ಲಿನ ಪ್ಲಾಟ್ ಅನ್ನು ೨೦೧೪ರಲ್ಲಿ ೪,೮೦,೦೦೦ ರೂಪಾಯಿಗೆ ಖರೀದಿಸುವ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಗ್ರಾಹಕರು ಹಂತಹAತವಾಗಿ ೩,೬೬,೦೦೦ ರೂ. ಮುಂಗಡ ಹಣ ಪಾವತಿಸಿದ್ದರು. ಬಾಕಿ ಮೊತ್ತ ತೆಗೆದುಕೊಂಡು ಖರೀದಿ ಪತ್ರ ನೋಂದಣಿ ಮಾಡಿಕೊಡುವಂತೆ ಗೀತಾ ಗೌಡರ ಕೇಳಿದÀರೂ ಸ್ಪಂದಿಸಿರಲಿಲ್ಲ. ಸೇವಾನ್ಯೂನತೆ ಪ್ರಶ್ನಿಸಿ ಗೀತಾ ಅವರು ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.
ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ದೂರುದಾರರು ಸಂದಾಯ ಮಾಡಿದ ೩,೬೬,೦೦೦ ರೂ. ಪೂರ್ತಿ ಸಂದಾಯವಾಗುವವರೆಗೆ ಶೇ. ೮ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳೊಳಗೆ ಸಂದಾಯ ಮಾಡಬೇಕು. ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ೫೦,೦೦೦ ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚ ೧೦,೦೦೦ ರೂ. ಪಾವತಿಸಬೇಕು ಎಂದು ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net