ಕೋಟ್ಪಾ ಉಲ್ಲಂಘಿಸಿದವರಿಗೆ ದಂಡ

27hun1
ಹುಣಸೂರು ನಗರವ್ಯಾಪ್ತಿಯಲ್ಲಿ ಕೋಟ್ಪಾ ಅಡಿ ಅಧಿಕಾರಿಗಳು ತಂಬಾಕು ಉತ್ಪನ್ನಗಳ ಮಾರಾಟ ಮಳಿಗೆಗಳ ಮೇಲೆ ದಾಳಿ ನಡೆಸಿದರು. ಶಿವಕುಮಾರ್, ರಾಜೇಶ್ವರಿ, ರುದ್ರಪ್ಪ ಇದ್ದರು.
Published on

ಹುಣಸೂರು: ಜಿಲ್ಲಾ ಸರ್ವೇಕ್ಷಣ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಕೋಟ್ಪಾ ಅಡಿ ಹೋಟೆಲ್, ಬಾರ್‌ಗಳು ಮತ್ತು ಕಿರಾನಿ ಅಂಗಡಿಗಳ ಮೇಲೆ ದಾಳಿ ಕಾರ್ಯಾಚರಣೆ ನಡೆಸಲಾಯಿತು.

ಶನಿವಾರ ನಡೆದ ದಾಳಿ ವೇಳೆ ಒಟ್ಟು 74 ಪ್ರಕರಣಗಳನ್ನು ದಾಖಲಿಸಿ, 9000 ರೂ. ದಂಡ ವಸೂಲಿ ಮಾಡಲಾಯಿತು.

ಈ ವೇಳೆ ಮಾತನಾಡಿದ ನಿರೀಕ್ಷಣಾಧಿಕಾರಿ ಪುಟ್ಟಸ್ವಾಮಿ, ಶಿಕ್ಷಣ ಇಲಾಖೆ, ನಗರಸಭೆ ಹಾಗೂ ಪೊಲೀಸ್ ಸಿಬ್ಬಂದಿ ಸಹಕಾರದೊಂದಿಗೆ ಹೋಟೆಲ್, ಬಾರ್, ರೆಸ್ಟೋರೆಂಟ್, ಬೇಕರಿ, ಕಿರಾಣಿ ಅಂಗಡಿಗಳು ಹಾಗೂ ಸಗಟು ಮಾರಾಟ ಅಂಗಡಿಗಳ ಮೇಲೆ ದಾಳಿ ನಡೆಸಿ ಕಾಯ್ದೆ ಉಲ್ಲಂಘನೆ ಪ್ರಕರಣಗಳಲ್ಲಿ ಸ್ಥಳದಲ್ಲಿಯೇ ದಂಡ ವಿಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ತಂಬಾಕು ಸೇವನೆಯಂತಹ ಪ್ರಕರಣಗಳನ್ನು ಗುರುತಿಸಿ ಎಚ್ಚರಿಕೆ ನೀಡಿ ದಂಡ ವಿಧಿಸಲಾಗಿದೆ. ಸಾರ್ವಜನಿಕರ ಸಹಯೋಗದಿಂದ ಮಾತ್ರ ಕೋಟ್ಪಾ ಪರಿಣಾಮಕಾರಿ ಜಾರಿ ಸಾಧ್ಯ ಎಂದರು.

ಜಿಲ್ಲಾ ಸಲಹೆಗಾರ ಜಿ.ಶಿವಕುಮಾರ್, ಸಾಮಾಜಿಕ ಕಾರ್ಯಕರ್ತ ನವೀದುಲ್ಲ ಷರೀಫ್, ಶಿಕ್ಷಣ ಇಲಾಖೆ ರುದ್ರಪ್ಪ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ, ನಗರಸಭೆ ಆರೋಗ್ಯ ನಿರೀಕ್ಷಕ ಶಶಿಕುಮಾರ್, ಪೊಲೀಸ್ ಇಲಾಖೆ ಮಂಜುನಾಥ್, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹನುಮಂತು, ಸಿದ್ದರಾಮೆಗೌಡ, ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net