

ಧಾರವಾಡ: ಮದುವೆ ಶಾಮಿಯಾನ ಹಾಕಿ ಡೆಕೊರೇಶನ್ ಮಾಡದ ಶಾಮಿಯಾನ ಕಂಪನಿಗೆ ದಂಡ ವಿಽಸಿ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಽಸಿ ಆದೇಶಿಸಿದೆ.
ಇಲ್ಲಿನ ಬಸವೇಶ್ವರ ಬಡಾವಣೆಯ ನಿವಾಸಿ ದ್ಯಾಮಪ್ಪ ಸಣ್ಣಕ್ಕಿ ಎಂಬುವರು ೨೦೨೧ರ ಏಪ್ರಿಲ್‌ನಲ್ಲಿ ಮಗನ ಮದುವೆಗಾಗಿ ಶಾಮಿಯಾನ ಹಾಕಿ ಡೆಕೋರೇಶನ್ ಮಾಡಲು ಹುಬ್ಬಳ್ಳಿಯ ಉಣಕಲ್ ಸಾಯಿನಗರದ ಓಂಕಾರ ಶಾಮಿಯಾನ ಮಾಲೀಕ ನಿಂಗಪ್ಪ ಒಪ್ಪಂದ ಮಾಡಿಕೊಂಡಿದ್ದರು. ಮುಂಗಡ ಹಣ ಕೂಡ ಕೊಟ್ಟಿದ್ದರು. ಈ ಮಧ್ಯೆ ಕೋವಿಡ್ ಬಂದಿದ್ದರಿAದ ಅಂಬರೈ ಗಾರ್ಡನ್‌ನಲ್ಲಿ ನಿಗದಿಯಾಗಿದ್ದ ಮದುವೆಯನ್ನು ತಮ್ಮ ಮನೆಯ ಮುಂದೆ ಮಾಡಲು ಸ್ಥಳ ಬದಲಾಯಿಸಿದ್ದರು. ಈ ಬಗ್ಗೆ ಶಾಮಿಯಾನ ಮಾಲೀಕರಿಗೆ ಮಾಹಿತಿ ನೀಡಿದ್ದರು. ಆದರೆ, ಶ್ಯಾಮಿಯಾನ ಮಾಲೀಕ ಕೋವಿಡ್ ಕಾರಣ ನೀಡಿ ಶಾಮಿಯಾನ ಹಾಕಿರಲಿಲ್ಲ, ಡೆಕೋರೇಶನ್ ಸಹ ಮಾಡಿರಲಿಲ್ಲ. ೨೦೨೨ರ ಸೆ. ೨೮ರಂದು ನಿಗದಿಯಾಗಿದ್ದ ಮಗಳ ಮದುವೆಗಾದರೂ ಶಾಮಿಯಾನ ಹಾಕಿ ಡೆಕೊರೇಷನ್ ಮಾಡಿಕೊಡುವಂತೆ ದ್ಯಾಮಪ್ಪ ವಿನಂತಿಸಿದ್ದರು. ಇದಕ್ಕೆ ಒಪ್ಪದ ಶಾಮಿಯಾನ ಮಾಲೀಕರ ವಿರುದ್ಧ ದ್ಯಾಮಪ್ಪ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ, ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು, ಒಪ್ಪಂದದAತೆ ಶಾಮಿಯಾನ ಮಾಲೀಕ ಮುಂಗಡ ಹಣ ಪಡೆದರೂ ಮದುವೆಗೆ ಶಾಮಿಯಾನ ಹಾಕಿ ಡೆಕೊರೇಶನ್ ಮಾಡಿಕೊಡದೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದೂರುದಾರರಿಂದ ಮುಂಗಡವಾಗಿ ಪಡೆದ ೫೦,೦೦೦ ರೂ. ಮತ್ತು ಅದರ ಮೇಲೆ ೨೦೨೧ರ ಮಾ. ೨೮ರಿಂದ ಶೇ. ೮ರಂತೆ ಬಡ್ಡಿ ಲೆಕ್ಕ ಹಾಕಿ ತಿಂಗಳೊಳಗೆ ಹಣ ಹಿಂತಿರುಗಿಸಬೇಕು. ದೂರುದಾರರಿಗೆ ಆಗಿರುವ ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ೧೫,೦೦೦ ರೂ. ಮತ್ತು ಪ್ರಕರಣದ ವೆಚ್ಚ ೫,೦೦೦ ರೂ. ನೀಡಬೇಕು ಎಂದು ಆಯೋಗ ಆದೇಶಿಸಿದೆ.