ರಿಲಯನ್ಸ್ ಇನೋಕಾಮ್ ಕಂಪನಿಗೆ ದಂಡ

web 66
Published on

ಧಾರವಾಡ: ಸೇವಾ ನ್ಯೂನತೆ ಎಸಗಿದ ರಿಲಯನ್ಸ್ ಇನೋಕಾಮ್ ಕಂಪನಿಗೆ ದಂಡ ವಿಽಸಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಹುಬ್ಬಳ್ಳಿಯ ತೋಳನಕೇರಿ ನಿವಾಸಿಗಳಾದ ಸಂಜಯ ಕಿತ್ತೂರ ಹಾಗೂ ಮಂಗಲಾ ಕಿತ್ತೂರ ಧಾರವಾಡದ ಮಾರ್ಕೆಟ್ ಪ್ರದೇಶದಲ್ಲಿ ತಮ್ಮ ಮಾಲೀಕತ್ವದ ಖುಲ್ಲಾ ಜಾಗವನ್ನು ಪ್ರತಿ ತಿಂಗಳ ಬಾಡಿಗೆ ಕರಾರಿನ ಮೇಲೆ ರಿಲೈನ್ಸ್ ಇನೋಕಾಮ್ ಲಿಮಿಟೆಡ್ ಕಂಪನಿಗೆ ಟವರ್ ಹಾಕಿಕೊಳ್ಳಲು ಕೊಟ್ಟಿದ್ದರು. ಕರಾರು ಅವಽ 2023ರ ಮೇ 22ರಂದು ಮುಗಿದಿತ್ತು. ಈ ಬಗ್ಗೆ ಮಾಲೀಕರು ಖುಲ್ಲಾ ಜಾಗ ಕಬ್ಜಾ ಕೊಡಬೇಕು. 2023ರ ಮೇನಿಂದ ಬಾಡಿಗೆ ನೀಡುವಂತೆ ಕೇಳಿದರೂ ಕಂಪನಿಯವರು ಕೊಟ್ಟಿರಲಿಲ್ಲ. ಇದರಿಂದ ಬೇಸತ್ತು ಕಿತ್ತೂರ ಅವರು ಜಿಲ್ಲಾ ಗ್ರಾಹಕರ ಆಯೋಗದ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ, ಕರಾರಿನಂತೆ ಅವಽ ಮುಗಿದರೂ ಟವರ್‌ಸಲಕರಣೆಗಳನ್ನು ಪಡೆದು ಖುಲ್ಲಾ ಜಾಗ ಕಬ್ಜಾ ಕೊಡದಿರುವುದು ಸೇವಾ ನ್ಯೂನತೆ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ೨೦೨೩ರ ಮೇನಿಂದ ೨೦೨೪ರ ಜನವರಿವರೆಗೆ ಬಾಕಿ ಬಾಡಿಗೆ ಹಣ ಪಾವತಿಸಬೇಕು. ದೂರುದಾರರಿಗೆ ಆಗಿರುವ ತೊಂದರೆ ಮತ್ತು ಅನಾನುಕೂಲಕ್ಕಾಗಿ 50,000 ರೂ. ಪರಿಹಾರ ಮತ್ತು ಪ್ರಕರಣದ ಖರ್ಚು 2,000 ರೂ. ನೀಡಬೇಕು ಎಂದು ಆಯೋಗ ಆದೇಶಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net