ಏಳು ಅಂಗಡಿಗಳ ಮಾಲೀಕರಿಗೆ ದಂಡ

19 NRD-2
Published on

ನರಗುಂದ: ಲಾಕ್​ಡೌನ್ ನಿಯಮ ಮೀರಿ ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ತೊಡಗಿದ್ದ 7 ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ಬುಧವಾರ ದಾಳಿ ನಡೆಸಿ 13,100 ರೂಪಾಯಿ ದಂಡ ವಿಧಿಸಿದ್ದಾರೆ.
ಬೆಳಗ್ಗೆ 6ರಿಂದ 10ರವರೆಗೆ ಅಂಗಡಿ ತೆರೆದು ವ್ಯಾಪಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಪಟ್ಟಣದ ಮಾರುಕಟ್ಟೆ ಪ್ರದೇಶದ ಕೆಲವು ವ್ಯಾಪಾರಸ್ಥರು 10 ಗಂಟೆ ನಂತರವೂ ಅಂಗಡಿಗಳನ್ನು ತೆರೆದು ವ್ಯಾಪಾರದಲ್ಲಿ ಮಗ್ನರಾಗಿದ್ದರು. ಆಗ ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಬ್ಯಾಳಿ ನೇತೃತ್ವದ ತಂಡ 7 ಅಂಗಡಿಗಳ ಮೇಲೆ ದಾಳಿ ನಡೆಸಿತು.
ಪುರಸಭೆ ಆರೋಗ್ಯ ಕಿರಿಯ ನಿರೀಕ್ಷಕಿ ಪ್ರೀತಿ ಗವಿಮಠ, ಶ್ರೀಕಾಂತ ನರಗುಂದ, ವಿ.ಬಿ. ಹಡಗಲಿ, ಎಚ್.ಎಚ್. ನಂದೆನ್ನವರ, ಮಹಾಂತೇಶ ಚಲವಾದಿ ಕಾರ್ಯಾಚರಣೆಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net