ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ದಂಡ

31 ckm 1
ಚಿಕ್ಕಮಗಳೂರಿನ ಕೆಲ ಬಾರ್ ಅಂಡ್‌ರೆಸ್ಟೋರೆAಟ್‌ಗಳ ಮೇಲೆ ದಾಳಿ ನಡೆಸಿದ ನಗರಸಭೆ ಅಧಿಕಾರಿಗಳ ತಂಡ ಅಕ್ರಮವಾಗಿ ಬಳಕೆ ಮಾಡುತ್ತಿದ್ದ ನಿಷೇಧಿತ ಪ್ಲಾಸ್ಟಿಕ್ ಲೋಟಗಳನ್ನು ವಶಕ್ಕೆ ಪಡೆದರು. ಆಯುಕ್ತ ಬಿ.ಸಿ.ಬಸವರಾಜ್, ಪರಿಸರ ಅಭಿಯಂತರೆ ತೇಜಸ್ವಿನಿ ಉಪಸ್ಥಿತರಿದ್ದರು.
Published on

ಚಿಕ್ಕಮಗಳೂರು: ನಗರ ವ್ಯಾಪ್ತಿಯ ಬಾರ್ ರೆಸ್ಟೋರೆಂಟ್‌ಗಳಲ್ಲಿ ಅನಧಿಕೃತ ಪ್ಲಾಸ್ಟಿಕ್ ಲೋಟಗಳನ್ನು ಬಳಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಬುಧವಾರ ನಗರಸಭೆ ಆಯುಕ್ತ ಬಿ.ಸಿ ಬಸವರಾಜ್ ನೇತೃತ್ವದಲ್ಲಿ ಆರೋಗ್ಯ ಪರಿವೀಕ್ಷಕರ ತಂಡ ದಾಳಿಮಾಡಿ ೪ ಬಾರ್‌ಗಳಿಗೆ ತಲಾ ೧ ಸಾವಿರ ದಂಡ ವಿಧಿಸಿದೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಗರಸಭೆ ಆಯುಕ್ತ ಬಿ.ಸಿ ಬಸವರಾಜ್, ನಗರ ವ್ಯಾಪ್ತಿಯ ಬಾರ್‌ಗಳಲ್ಲಿ ಪ್ಲಾಸ್ಟಿಕ್ ಲೋಟ ಬಳಕೆ ಮಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ಬಾರ್‌ಗಳಿಗೆ ದಿಢೀರ್ ದಾಳಿಮಾಡಿ ಗೃಹ ಮಂಡಳಿ ಬಡಾವಣೆ ಹಾಗೂ ಹಿರೇಮಗಳೂರು ಭಾಗದ ಬಾರ್‌ಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಕ್ಕೆ ಪಡೆದು ದಂಡ ವಿಧಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಮದ್ಯ ಸೇವಿಸಲು ಪ್ಲಾಸ್ಟಿಕ್ ಲೋಟಗಳನ್ನು ಬಳಕೆ ಮಾಡುತ್ತಿರುವ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಿದರೂ ಸ್ಪಂದಿಸದಿರುವ ಹಿನ್ನೆಲೆಯಲ್ಲಿ ಇಂದು ದಿಢೀರ್ ದಾಳಿಮಾಡಲಾಗಿದೆ ಎಂದರು.
ಕನಿಷ್ಟ ೫೦ ಕೆ.ಜಿ ಪ್ಲಾಸ್ಟಿಕ್ ಲೋಟಗಳನ್ನು ವಶಪಡಿಸಿಕೊಂಡಿದ್ದು, ಪ್ರಥಮ ಬಾರಿ ಆಗಿರುವುದರಿಂದ ಪ್ರತೀ ಬಾರ್‌ಗೆ ೧ ಸಾವಿರ ರೂ.ಗಳಂತೆ ದಂಡ ವಿಧಿಸಲಾಗಿದೆ. ಪುನಾಃ ಇದೇ ವರ್ತನೆ ಮುಂದುವರೆದರೆ ಬಾರ್ ಅಂಡ್ ರೆಸ್ಟೋರೆಂಟ್‌ನ ಉದ್ಯಮಿ ಪರವಾನಗಿಯನ್ನು ರದ್ದುಪಡಿಸಿ ಅಂಗಡಿಯನ್ನು ಮುಚ್ಚಿಸಲಾಗುವುದು ಎಂದು ಎಚ್ಚರಿಸಿದರು.
ನಗರದ ಎಲ್ಲಾ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕರು ನಿಷೇಧಿತ ಪ್ಲಾಸ್ಟಿಕ್ ಲೋಟಗಳನ್ನು ಬಳಸಬಾರದು. ಈ ಮೂಲಕ ನಗರಸಭೆಯೊಂದಿಗೆ ಸಹಕರಿಸಿ ಪ್ರಕೃತಿ ಉಳಿಸಿ, ಸ್ವಚ್ಚತೆ ಕಾಪಾಡಬೇಕು ಎಂದು ಮನವಿ ಮಾಡಿದರು.
ಪ್ಲಾಸ್ಟಿಕ್ ಲೋಟಗಳ ತಯಾರಿಕೆ ನಗರದಲ್ಲಿ ಎಲ್ಲೂ ಆಗುತ್ತಿಲ್ಲ. ಶಿವಮೊಗ್ಗ, ಹಾಸನ ಸೇರಿದಂತೆ ಪಕ್ಕದ ಜಿಲ್ಲೆಗಳಿಂದ ರಾತ್ರಿ ಸಮಯದಲ್ಲಿ ಬಾರ್‌ಗಳಿಗೆ ಸರಬರಾಜಾಗುತ್ತಿದ್ದು, ಈ ಸಂಬAಧ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಗೆ ನಿರ್ದೇಶನ ನೀಡಿ ಪ್ಲಾಸ್ಟಿಕ್ ಲೋಟ ಸರಬರಾಜಾಗದಂತೆ ತಡೆಯಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ ಎಂದರು.
ನಗರಸಭೆ ಪರಿಸರ ಅಭಿಯಂತರೆ ತೇಜಸ್ವಿನಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net