ಮುಧೋಳದಲ್ಲಿ ಲೇಖನಿ ಸ್ಥಗಿತ

Pen stalled in Mudhol
Pen stalled in Mudhol
Published on

ಮುಧೋಳ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ನಗರ ಸ್ಥಳೀಯ ಸಂಸ್ಥೆಗಳ ರಾಜ್ಯ ಪೌರ ನೌಕರರ ಸಂಘ ನೇತೃತ್ವದಲ್ಲಿ ನಗರಸಭೆಯ ಪೌರ ನೌಕರರು ಮತ್ತು ಪೌರ ಕಾರ್ಮಿಕರು ಲೇಖನಿ ಸ್ಥಗಿತಗೊಳಿಸಿ ಸೋಮವಾರ ಪ್ರತಿಭಟನೆ ನಡೆಸಿದರು.

ಮುಷ್ಕರದ ನಂತರ ನೌಕರರು ಬಾಗಲಕೋಟೆಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ನಾಗರಿಕ ಸೇವಾ ನಿಯಮಗಳನ್ನು ನಗರ ಸ್ಥಳೀಯ ಸಂಸ್ಥೆಗಳ ನೌಕರರಿಗೂ ಅನ್ವಯಿಸುವುದು, ಹೊರಗುತ್ತಿಗೆ ನೌಕರರನ್ನು ನೇರ ಪಾವತಿಗೆ ಒಳಪಡಿಸುವುದು ಮತ್ತು ದಿನಗೂಲಿ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆಗಳಾಗಿವೆ ಎಂದು ನೌಕರರ ಸಂಘದ ಕಾರ್ಯದರ್ಶಿ ಮಹಾದೇವ ಗುಡಿ ಹೇಳಿದರು.

ನಾವು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ಏ.12 ರಿಂದ ಮೇ 26ರ ವರೆಗೆ ಹಂತ ಹಂತವಾಗಿ ಪ್ರತಿಭಟನೆಗಳನ್ನು ನಡೆಸಿಕೊಂಡು ಬಂದಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಮೇ 27ರಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ಎಚ್ಚರಿಸಿದರು.

ನಗರಸಭೆ ವ್ಯವಸ್ಥಾಪಕಿ ಭಾರತಿ ಜೋಶಿ, ಎಸ್.ಬಿ. ಪಾಟೀಲ, ಪೂರ್ಣಾನಂದ ನೀಲಕಂಠಮಠ, ಕಿರಿಯ ಇಂಜಿನಿಯರ್ ರಾಜು ಚವಾಣ, ಮಧುಮತಿ, ಶಂಕರ ಮೇತ್ರಿ, ಸಿದ್ದು ಅರಳಿಮಟ್ಟಿ, ಮಲಯ್ಯ ಹಿರೇಮಠ, ಕುಮಾರ ಮೇತ್ರಿ, ಜೆ.ಎನ್. ಮುಲ್ಲಾ, ಸುವರ್ಣಾ ಚವಾಣ, ಗಂಗಮ್ಮ ಶಿರೋಳ, ಪೌರ ನೌಕರರ ಸಂಘದ ಶಾಖಾ ಅಧ್ಯಕ್ಷ ಮಾಂಗಲೇಶ ಪೂಜಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net