ಕುಕ್ಕರಹಳ್ಳಿ ಕೆರೆಯಲ್ಲಿ ಪೆಲಿಕಾನ್ ಪಕ್ಷಿ ಸಾವು

Pelican dies in Kukkarahalli lake
Published on

ಮೈಸೂರು: ನಗರದ ಕುಕ್ಕರಹಳ್ಳಿ ಕೆರೆಯಲ್ಲಿ ವಲಸೆ ಹಕ್ಕಿ ಪೆಲಿಕಾನ್ ಬುಧವಾರ ಮೃತಪಟ್ಟಿದೆ.

ಮೈಸೂರು ವಿಶ್ವವಿದ್ಯಾಲಯದ ಯುಜಿಸಿ ಕಟ್ಟಡದ ಬಳಿ ಇರುವ ಕೆರೆಯ ಭಾಗದಲ್ಲಿ ಪಕ್ಷಿಯ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಪ್ರಸಕ್ತ ವರ್ಷ ಸಾಕಷ್ಟು ಸಂಖ್ಯೆಯಲ್ಲಿ ಪೆಲಿಕಾನ್ ಪಕ್ಷಿಗಳು ಕುಕ್ಕರಹಳ್ಳಿ ಕೆರೆಗೆ ವಲಸೆ ಬಂದಿದ್ದು, ಈ ಹಕ್ಕಿಗಳು ಎಲ್ಲರ ಗಮನ ಸೆಳೆಯುತ್ತಿವೆ. ಆದರೆ, ಪೆಲಿಕಾನ್ ಪಕ್ಷಿಯೊಂದು ಮೃತಪಟ್ಟಿರುವುದು ಎಲ್ಲರಲ್ಲೂ ಬೇಸರ ಮೂಡಿಸಿದೆ.

ಸಾಮಾನ್ಯವಾಗಿ ಪೆಲಿಕಾನ್ ಹಕ್ಕಿಗಳು ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಕುಕ್ಕರಹಳ್ಳಿ ಕೆರೆಗೆ ವಲಸೆ ಬರುತ್ತವೆ. 2017ರಲ್ಲಿ 6 ಪೆಲಿಕಾನ್‌ಗಳು, 2018ರಲ್ಲಿ 3, 2019ರಲ್ಲಿ 2 ಪೆಲಿಕಾನ್‌ಗಳು ಮೃತಪಟ್ಟಿದ್ದವು. ಪಕ್ಷಿಯು ವಯೋಸಹಜವಾಗಿ ಮೃತಪಟ್ಟಿದೆಯೇ, ಅನಾರೋಗ್ಯದಿಂದ ಮೃತಪಟ್ಟಿದೆಯೇ ಅಥವಾ ಕೆರೆಯ ಕಲುಷಿತ ವಾತಾವರಣದಿಂದ ಮೃತಪಟ್ಟಿದೆಯೇ ಎಂಬುದು ಪ್ರಯೋಗಾಲಯದಲ್ಲಿ ಪರೀಕ್ಷೆಯಿಂದ ದೃಢಪಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net