ಮುಂಬೈಯಲ್ಲಿ ಪೇಜಾವರ ಶ್ರೀ ನಿಧಿ ಸಂಗ್ರಹ ಪಾದಯಾತ್ರೆ

pejavarshree ram
Published on

ಉಡುಪಿ: ಅಯೋಧ್ಯೆ ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಹಾಗೂ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾನುವಾರ ರಾಮ ಮಂದಿರ ನಿರ್ಮಾಣಕ್ಕೆ ಮುಂಬೈ ಮಹಾನಗರದ ಖಾರ್ ಪಶ್ಚಿಮದಲ್ಲಿನ ಖಾರ್‌ದಾಂಡದ ಪುರಾತನ ರಾಮ ಮಂದಿರದಲ್ಲಿ ನಿಧಿಸಂಗ್ರಹಕ್ಕೆ ಚಾಲನೆ ನೀಡಿದರು.

ಬಳಿಕ ಸ್ಥಳೀಯ ಬಡಾವಣೆಯ ಮನೆಗಳಿಗೆ ಸಂಚರಿಸಿ ದೇಣಿಗೆ ಸ್ವೀಕರಿಸಿದರು. ಭಕ್ತರು ಬಹು ಉತ್ಸಾಹದಿಂದ ದೇಣಿಗೆ ನೀಡಿ ಶ್ರೀರಾಮ್ ಕೀ ಜೈ ಉದ್ಘೋಷ ಮಾಡಿದರು.

ಪಾದಯಾತ್ರೆಯಲ್ಲಿ ಮಹಾರಾಷ್ಟ್ರ- ಗೋವಾ ಪ್ರಾಂತ್ಯ ವಿಎಚ್‌ಪಿ ಮುಖ್ಯಸ್ಥ ಶಂಕರ ಗಾಂವ್ಕರ್, ಕೊಂಕಣಿ ಪ್ರಾಂತ ವಿಭಾಗದ ಅಧಿಕಾರಿ ನರೇಶ ಪಾಟೀಲ, ಆರ್‌ಎಸ್‌ಎಸ್ ವಿಭಾಗ ಸಂಚಾಲಕ, ಪೂರ್ವ ನ್ಯಾಯಧೀಶ ಜೋಗ್ ಸಿಂಗ್ ಹಾಗೂ ಶಾಸಕ ಆಶೀಷ್ ಶೇಲ್ಹಾರ್, ಆರ್‌ಎಸ್‌ಎಸ್ ಪ್ರಮುಖ ನಿತ್ಯೇಶ ಶ್ಹಾ, ವಿದ್ವಾನ್ ಡಾ. ರಾಮದಾಸ ಉಪಾಧ್ಯಾಯ ಮೊದಲಾದವರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net