ಪ್ರಧಾನಿ ಪಂಜಾಬ್​ ಭೇಟಿ ವೇಳೆ ಭದ್ರತಾ ವೈಫಲ್ಯ: ಪೇಜಾವರಶ್ರೀಗಳ ಪ್ರತಿಕ್ರಿಯೆ ಇದು..

1215653
Published on

ಉಡುಪಿ: ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್​ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಡೆದು ಅಲ್ಲಿನ ರಸ್ತೆಯಲ್ಲಿ 20 ನಿಮಿಷ ನಿಲ್ಲುವಂತೆ ಮಾಡಿದ್ದ ಘಟನೆಗೆ ಸಂಬಂಧಿಸಿದಂತೆ ಹಲವಾರು ಮಂದಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಆ ಸಂಬಂಧ ಉಡುಪಿಯ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಕೂಡ ಪ್ರತಿಕ್ರಿಯಿಸಿದ್ದಾರೆ.

ವೈರಿ ದೇಶದ ಪಕ್ಕದಲ್ಲೇ ಪ್ರಧಾನಿಗೆ ದಿಗ್ಬಂಧನ ಹಾಕಲಾಗಿದೆ. ರಾಜ ಯಾರೇ ಇರಲಿ, ಈ ಥರದ ನಿರ್ಲಕ್ಷ ಸರಿಯಲ್ಲ. ಅಧಿಕಾರದಲ್ಲಿ ರಾಜನನ್ನು ಕಳೆದುಕೊಂಡರೆ ಆಗಬಹುದಾದ ದೊಂಬಿ ಊಹಿಸಲಸಾಧ್ಯ, ಇಂತಹ ಘಟನೆ ಮತ್ತೊಮ್ಮೆ ಮರುಕಳಿಸಬಾರದು ಎಂದು ಅವರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ದೇಶದ ಒಳಗೆ ಅದೆಷ್ಟೋ ದೊಂಬಿ ಗಲಾಟೆಗಳು ನಡೆದಿವೆ. ನಮ್ಮ ದೇಶದಲ್ಲಿ ಹಿಂದೆಯೂ ಇಂತಹ ದುರ್ಘಟನೆಗಳು ನಡೆದಿವೆ. ಏನೇನೋ ದೊಂಬಿಗಳಿಗೆ ಈ ದೇಶ ಸಾಕ್ಷಿಯಾಗಿದೆ. ಶತ್ರು ದೇಶಗಳು ಇಂತಹ ಅವಕಾಶಕ್ಕೆ ಕಾಯುತ್ತಿರುತ್ತವೆ. ಇಂತಹ ಘಟನೆಗಳಾಗದಂತೆ ದೇವರಲ್ಲಿ ಪ್ರಾರ್ಥನೆ ಮಾಡುತ್ತೇವೆ ಎಂಬುದಾಗಿ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net