ಪೇಜಾವರ ಶ್ರೀಗಳಿಂದ ಮಹಾರಾಷ್ಟ್ರ ರಾಜ್ಯಪಾಲರ ಭೇಟಿ

pejavara new
Published on

ಉಡುಪಿ: ಅಯೋಧ್ಯೆ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‌ನ ಟ್ರಸ್ಟಿ ಹಾಗೂ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಭಾನುವಾರ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಬೃಹನ್ಮುಂಬೈ ಮಲಬಾರ್‌ಹಿಲ್‌ನ ಮಹಾರಾಷ್ಟ್ರ ರಾಜಭವನದಲ್ಲಿ ಭೇ ಟಿ ಮಾಡಿದರು.

ದೇವರ ಆರಾಧನೆಯಿಂದ ಒಳ್ಳೆಯ ಸಂಪತ್ತು ಮತ್ತು ವಿಜಯ ಪ್ರಾಪ್ತಿಯಾಗುತ್ತದೆ. ಅಯೋಧ್ಯೆ ಶ್ರೀರಾಮ ದೇವರ ಆರಾಧನಾ ಕೇಂದ್ರವನ್ನು ಸಮಸ್ತ ಭಕ್ತರ ಶ್ರದ್ಧಾಕೇಂದ್ರವಾಗಿಸುವಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಪೇಜಾವರ ಶ್ರೀ ತಿಳಿಸಿದರು.

ನಾಗಾಲೆಂಡ್ ಮಾಜಿ ರಾಜ್ಯಪಾಲ ಪದ್ಮನಾಭ ಆಚಾರ್ಯ, ವಿಶ್ವ ಹಿಂದು ಪರಿಷತ್ ಮಹಾರಾಷ್ಟ್ರ ಕಾರ್ಯದರ್ಶಿ ರಾಮಚಂದ್ರ ರಾಮುಕಾ, ಕೋಶಾಧಿಕಾರಿ ರಾಮಸ್ವರೂಪ್ ಅಗರ್ವಾಲ್, ಪೇಜಾವರ ಮಠ ಮುಂಬೈ ಶಾಖೆ ವ್ಯವಸ್ಥಾಪಕ ಡಾ.ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್ ಪುತ್ತಿಗೆ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net