ಪೇಜಾವರ ಶ್ರೀಗಳಿಂದ ರಾಜ್ಯಪಾಲರ ಭೇಟಿ

governer
Published on

ಉಡುಪಿ: ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ನಿಧಿ ಸಂಗ್ರಹ ಅಭಿಯಾನ ಹಿನ್ನ್ನೆಲೆಯಲ್ಲಿ ದಕ್ಷಿಣ ರಾಜ್ಯಗಳ ಸಂಚಾರದಲ್ಲಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಬುಧವಾರ ರಾಜಭವನದಲ್ಲಿ ರಾಜ್ಯಪಾಲ ವಾಜೂಭಾಯಿ ರುಡಾ ಭಾಯಿ ವಾಲಾ ಅವರನ್ನು ಭೇಟಿ ಮಾಡಿ ಮಾಹಿತಿ ಪತ್ರ ಅರ್ಪಿಸಿದರು.

ಶ್ರೀಗಳನ್ನು ಗೌರವಿಸಿದ ರಾಜ್ಯಪಾಲರು, 1953ರಲ್ಲಿ ಗುರೂಜಿ ಗೋಳ್ವಲ್ಕರ್ ಅವರು ಗೋಹತ್ಯಾ ನಿಷೇಧಕ್ಕೆ ಕರೆ ನೀಡಿದಾಗ ನಾನು ಎಳೆಯ ಯುವಕನಾಗಿದ್ದೆ. ಆಗ ಸೈಕಲ್‌ನಲ್ಲಿ ಸ್ನೇಹಿತನನ್ನು ಕರೆದುಕೊಂಡು ಗುಜರಾತಿನಲ್ಲಿ ಮನೆ ಮನೆಗೆ ತೆರಳಿ ಸಹಿ ಸಂಗ್ರಹ ಮಾಡಿದ್ದೆವು. ಸಾಕ್ಷರತೆ ಕೊರತೆ ಇದ್ದ ಆ ಕಾಲದಲ್ಲಿ ಜನರು ಹೆಬ್ಬೆಟ್ಟೊತ್ತಿ ಬೆಂಬಲಿಸಿದ್ದರು ಎಂದು ಸ್ಮರಿಸಿದರು. ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಬೆಂಬಲ ನೀಡುವುದಾಗಿಯೂ ತಿಳಿಸಿದರು. ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಗೋಹತ್ಯೆ ನಿಷೇಧ ಕಾಯ್ದೆಯನ್ನೂ ಬೆಂಬಲಿಸುವುದಾಗಿ ಹೇಳಿದರು.

ವಿಶ್ವ ಹಿಂದು ಪರಿಷತ್ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ, ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣು ಆಚಾರ್ಯ, ಕೃಷ್ಣಮೂರ್ತಿ ಭಟ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net