ಸಂತರ ಮಾರ್ಗದರ್ಶನ ಸನಾತನಧರ್ಮಕ್ಕೆ ಪ್ರೇರಕಶಕ್ತಿ

udp-31-santha
Published on

ಉಡುಪಿ: ಸಂತರ ಮಾರ್ಗದರ್ಶನ ಸನಾತನಧರ್ಮಕ್ಕೆ ಭವಿಷ್ಯದಲ್ಲಿಯೂ ಪ್ರೇರಕಶಕ್ತಿಯಾಗಿದೆ. ಸತ್ಸಂಗವನ್ನು ಏರ್ಪಡಿಸಿರುವುದು ಸನಾತನಧರ್ಮದ ಮೇಲೆ ಪೇಜಾವರ ಶ್ರೀಗಳಿಗೆ ಇರುವ ಶ್ರದ್ಧೆ ಮತ್ತು ಕಾಳಜಿಗೆ ಸಾಕ್ಷಿಯಾಗಿದೆ ಎಂದು ವಿ ಹಿಂ ಪ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಅಲೋಕ್​ ಕುಮಾರ್​ ಹೇಳಿದರು.

ನವದೆಹಲಿಯ ವಸಂತ್​ ಕುಂಜ್​ ಪೇಜಾವರ ಶಾಖಾ ಮಠದ ಆವರಣದಲ್ಲಿ ಮಂಗಳವಾರ ಸಾಯಂಕಾಲ ನಡೆದ ಸಂತ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಹಿಂದು ಪರಿಷತ್ತಿನ ಕೇಂದ್ರೀಯ ಮಾರ್ಗದರ್ಶಕ ಮಂಡಳಿ ಸದಸ್ಯ, ಪೇಜಾವರ ಶ್ರೀ ವಿಶ್ವಪ್ರಸನ್ನತಿರ್ಥ ಸ್ವಾಮೀಜಿ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ವರ್ತಮಾನದಲ್ಲಿ ಸನಾತನ ಧರ್ಮದ ಸವಾಲುಗಳ ಕುರಿತಾಗಿ ಮಂಥನ ನಡೆಯಿತು. ಸದ್ಯದಲ್ಲೇ ನಡೆಯುವ ಚುನಾವಣೆಗಳ ಹೊತ್ತಲ್ಲೂ ಹಿಂದು ಸಮಾಜ ಈ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು ಹಿಂದು ವಿಚಾರಗಳಿಗೆ ಬದ್ಧರಾದವರನ್ನೇ ಅಧಿಕಾರಕ್ಕೆ ತರುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಕೆಲವು ಸಂತರು ಸೂಚಿಸಿದರು.
ವಿ ಹಿಂ ಪ ಪ್ರಾಂತ ಕಾರ್ಯದರ್ಶಿ ದೀಪಕ್​ ಗುಪ್ತಾ , ಸುರೇಂದ್ರ ಗುಪ್ತಾ , ಉದ್ಯಮಿ ರಮೇಶ್​ ವಿಗ್​ , ವಿದ್ವಾಂಸರಾದ ಡಾ.ವರಖೇಡಿ ಶ್ರೀನಿವಾಸ ಆಚಾರ್ಯ , ರಾಮವಿಠಲಾಚಾರ್ಯ , ವೀರನಾರಾಯಣ ಪಾಂಡುರಂಗಿ , ಗುರುರಾಜ ಕಲ್ಕೂರ, ಶ್ರೀಗಳ ಆಪ್ತ ಕಾರ್ಯದರ್ಶಿ ವಿಷ್ಣಮೂರ್ತಿ ಆಚಾರ್ಯ , ಕೃಷ್ಣಮೂರ್ತಿ ಭಟ್​, ಶ್ರೀವತ್ಸ ತಂತ್ರಿ , ಶ್ರೀನಿವಾಸ ಪ್ರಸಾದ್​, ವಾಸುದೇವಭಟ್​ ಪೆರಂಪಳ್ಳಿ ಮೊದಲಾದವರು ಉಪಸ್ಥಿತರಿದ್ದರು. ವಿದ್ವಾನ್​ ಶಶಾಂಕ್​ ಭಟ್​ ಪ್ರಸ್ತಾವನೆಗೈದು ಸ್ವಾಗತಿಸಿದರು. ವಿದ್ವಾನ್​ ನಚಿಕೇತ್​ ಶಮಾರ್ ವೇದಘೋಷಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net