ನೀಲಾವರ ಗೋಶಾಲೆಗೆ ಪೇಜಾವರ ಶ್ರೀ ಪಾದಯಾತ್ರೆ

udp-26-pejavara
Published on

ಉಡುಪಿ: ಅಯೋಧ್ಯಾ ರಾಮಮಂದಿರ ವಿಶ್ವಸ್ಥ, ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಭಾನುವಾರ ಮುನ್ನೂರಕ್ಕೂ ಅಧಿಕ ಶಿಷ್ಯರು ಹಾಗೂ ಭಕ್ತರೊಂದಿಗೆ ಉಡುಪಿ ಶ್ರೀ ಕೃಷ್ಣಮಠದಿಂದ ನೀಲಾವರ ಗೋಶಾಲೆಗೆ 7ನೇ ವರ್ಷದ ಪಾದಯಾತ್ರೆ ನಡೆಸಿದರು.

ಬೆಳಿಗ್ಗೆ ಉಡುಪಿ ಶ್ರೀ ಕೃಷ್ಣಮಠದಿಂದ ಯಾತ್ರೆ ಪ್ರಾರಂಭವಾಗಿದ್ದು, ರಥಬೀದಿ-ಬಡಗುಪೇಟೆ -ಕಲ್ಸಂಕ-ಗುಂಡಿಬೈಲು ಮಾರ್ಗವಾಗಿ ಅಂಬಾಗಿಲು ರಾಷ್ಟ್ರೀಯ ಹೆದ್ದಾರಿ ಬಳಿ ಹೇರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಟ್ಟದ ದೇವರ ಪೂಜೆ ಮತ್ತು ಭೋಜನ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ಬಳಿಕ ಕುಂಜಾಲು ಮಾರ್ಗವಾಗಿ ಯಾತ್ರೆ ಗೋಶಾಲೆ ತಲುಪಿತು.

ನೀಲಾವರದಲ್ಲಿ ಯಾತ್ರೆ ಸಂಪನ್ನಗೊಳಿಸಿ ಮಾತನಾಡಿದ ಶ್ರೀಗಳು, ಪಾದಯಾತ್ರೆಯಿಂದ ಭಗವದ್ಭಕ್ತಿ, ಸಾತ್ವಿಕರ ಸಹವಾಸ, ಸುತ್ತಮುತ್ತಲ ಪರಿಸರ ಪ್ರಕೃತಿಗಳ ಬಗ್ಗೆ ಅರಿವಾಗುತ್ತದೆ. ವಿವಿಧ ತೀರ್ಥಕ್ಷೇತ್ರಗಳ ಸಂದರ್ಶನದಿಂದ ಸತ್ಫಲ ಪ್ರಾಪ್ತಿ , ಸಾತ್ವಿಕ ಪ್ರಜ್ಞೆಯ ಜಾಗೃತಿಯಾಗುತ್ತದೆ. ವಿವಿಧ ಬಗೆಯ ಜನಜೀವನದ ಪರಿಚಯ ಸಾಧ್ಯ. ಇದರಿಂದ ಪರರ ಒಳಿತಿಗಾಗಿ ಕಾರ್ಯಪ್ರವೃತ್ತರಾಗುವ ಅಪೇಕ್ಷೆಗಳು ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಕಳೆದ ಮೂವತೆದು ವರ್ಷಗಳಿಂದ ಶಿಷ್ಯರೊಂದಿಗೆ ದೇಶದ ನೂರಾರು ತೀರ್ಥ ಕ್ಷೇತ್ರಗಳನ್ನು ಸಂದರ್ಶಿಸುತ್ತಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net